News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆತ್ಮನಿರ್ಭರ ಭಾರತ: ಬ್ಲ್ಯಾಕ್ ಫಂಗಸ್‌ಗೆ ಔಷಧ ಉತ್ಪಾದಿಸಲು 5 ಕಂಪನಿಗಳಿಗೆ ಅನುಮತಿ

ನವದೆಹಲಿ: ಬ್ಲ್ಯಾಕ್ ಫಂಗಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗೆ ಬಳಸುವ ಔಷಧವಾದ ಆಂಫೊಟೆರೆಸಿನ್-ಬಿ ಅನ್ನು ಉತ್ಪಾದಿಸಲು ಇನ್ನೂ ಐದು ಔಷಧ ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ತಿಳಿಸಿದ್ದಾರೆ.

ಆರು ಭಾರತೀಯ ಫಾರ್ಮಾ ಕಂಪನಿಗಳು ಈಗಾಗಲೇ ಔಷಧವನ್ನು ತಯಾರಿಸುತ್ತಿವೆ.

ಆಂಫೊಟೆರೆಸಿನ್-ಬಿ ಯ ಆರು ಲಕ್ಷ ಬಾಟಲುಗಳನ್ನು ಆಮದು ಮಾಡಲು ಕೂಡ ಫಾರ್ಮಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದಿದ್ದಾರೆ.

ಔಷಧ ಉತ್ಪಾದನೆಗೆ ಅನುಮೋದನೆ ಪಡೆದ ಕಂಪನಿಗಳೆಂದರೆ ಎಮ್‌ಕ್ಯೂರ್ ಫಾರ್ಮಾಸ್ಯುಟಿಕಲ್ಸ್, ನ್ಯಾಟ್ಕೊ ಫಾರ್ಮಾ, ಗುಫಿಕ್ ಬಯೋಸೈನ್ಸ್ ಲಿಮಿಟೆಡ್, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಲೈಕಾ ಫಾರ್ಮಾಸ್ಯುಟಿಕಲ್ಸ್.

ಈಗಾಗಲೇ ಔಷಧವನ್ನು ಉತ್ಪಾದಿಸುತ್ತಿರುವ ಆರು ಕಂಪನಿಗಳೆಂದರೆ ಮೈಲಾನ್, ಭಾರತ್ ಸೀರಮ್ಸ್, ಬಿಡಿಆರ್ ಫಾರ್ಮಾ, ಸನ್ ಫಾರ್ಮಾ, ಸಿಪ್ಲಾ ಮತ್ತು ಲೈಫ್ ಕೇರ್.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top