ಬೆಂಗಳೂರು: ಕೊರೋನಾ ಸೋಂಕಿನಿಂದ ರಾಜ್ಯ ಅಕ್ಷರಶಃ ತತ್ತರಿಸಿದೆ. ಈ ಸಮಯದಲ್ಲಿಯೇ ಕೊರೋನಾ ಲಸಿಕೆಗಳಿಗೂ ಕೊರತೆ ಉಂಟಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ನಡುವೆಯೇ ರಾಜ್ಯ ಸರ್ಕಾರ 2 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನು ಖರೀದಿ ಮಾಡಿರುವ ಬಗ್ಗೆ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದು, ಕೊಂಚ ನಿರಾಳತೆ ಒದಗಿಸಿದೆ ಎನ್ನಬಹುದಾಗಿದೆ.
ರಾಜ್ಯ ಸರ್ಕಾರ ಖರೀದಿ ಮಾಡಿರುವ 2 ಲಕ್ಷ ಲಸಿಕೆಗಳು ಸಹ ರಾಜ್ಯಕ್ಕೆ ತಲುಪಿದೆ ಎಂದು ಸುಧಾಕರ್ ದೃಢಪಡಿಸಿದ್ದಾರೆ. ಸರ್ಕಾರದ ನೇರ ಖರೀದಿ ಪ್ರಕ್ರಿಯೆಯಡಿ ಈ ಲಸಿಕೆಗಳು ರಾಜ್ಯಕ್ಕೆ ಬಂದಿವೆ. ಇದನ್ನು ಆನಂದ ರಾವ್ ವೃತ್ತದಲ್ಲಿರುವ ರಾಜ್ಯ ಲಸಿಕಾ ಉಗ್ರಾಣದಲ್ಲಿ ದಾಸ್ತಾನಿರಿಸಿರುವುದಾಗಿಯೂ ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 5.11 ಕೋಟಿಗಳಷ್ಟು ಜನರು ಲಸಿಕೆ ಪಡೆಯಲು ಅರ್ಹರಿದ್ದಾರೆ. ಲಸಿಕೆ ಆರಂಭವಾದ ದಿನದಿಂದ ಈ ವರೆಗೆ 1,11,88,143 ಜನರಿಗೆ ಲಸಿಕೆ ವಿತರಿಸಲಾಗಿದೆ. ಇನ್ನೂ 4.22 ಕೋಟಿ ಜನರಿಗೆ ಲಸಿಕೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಕೊರತೆ ನೀಗಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.