ಮುಂಬಯಿ: ಕೋವಿಡ್ ಹೋರಾಟದ ಈ ಸಂದರ್ಭದಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಅಸಾಧಾರಣವಾಗಿದೆ. ಬಿರು ಬೇಸಿಗೆಯ ಈ ಸಮಯದಲ್ಲಿ ದೀರ್ಘ ಸಮಯದವರೆಗೆ ಪಿಪಿಇ ಕಿಟ್ ಧರಿಸಿ ರೋಗಿಗಳ ಆರೈಕೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಅವರು ಇದ್ದಾರೆ. ವಿಪರೀತ ಶೆಕೆ ಮತ್ತು ಬೆವರು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ಆರೋಗ್ಯ ಕಾರ್ಯಕರ್ತರ ಈ ಸಮಸ್ಯೆಯನ್ನು ದೂರ ಮಾಡಲೆಂದೇ ಪುಣೆ ಮೂಲದ ಸ್ಟಾರ್ಟ್ಅಪ್ವೊಂದು ಪಿಪಿಇ ಕಿಟ್ಗೆ ವೆಂಟಿಲೇಷನ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಆರೋಗ್ಯ ಕಾರ್ಯಕರ್ತರನ್ನು ಶೆಖೆಯಿಂದ ಕಾಪಾಡುತ್ತದೆ. ಈ ವೆಂಟಿಲೇಷನ್ ಸಿಸ್ಟಮ್ ಹೊಂದಿರುವ ಪಿಪಿಇ ಕಿಟ್ ಅನ್ನು ಧರಿಸಿದರೆ ಬೆವರುವುದಿಲ್ಲ, ದೇಹಕ್ಕೆ ಆರಾಮದಾಯಕತೆ ಸಿಗುತ್ತದೆ ಮತ್ತು ಫಂಗಸ್ ಹರಡುವುದನ್ನು ಇದು ತಡೆಯುತ್ತದೆ.
ಸಾಂಪ್ರದಾಯಿಕ ಪಿಪಿಇ ಧರಿಸಿಸುವ ಸರಳ ಬೆಲ್ಟ್ನಂತೆಯೇ ಸೊಂಟದ ಮೇಲೆ ‘ಕೋವ್-ಟೆಕ್ ವೆಂಟಿಲೇಷನ್ ಸಿಸ್ಟಮ್’ ಅನ್ನು ಕಿಟ್ ಅಲ್ಲಿ ಜೋಡಿಸಬಹುದು ಮತ್ತು ಕೋವಿಡ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗೆ ಇದು ಆರಾಮ ನೀಡುತ್ತದೆ. ವೆಂಟಿಲೇಷನ್ ವ್ಯವಸ್ಥೆಯ ವಿನ್ಯಾಸವು ಪಿಪಿಇ ಕಿಟ್ನ ಒಳಗೆ ಸಂಪೂರ್ಣ ಗಾಳಿಯನ್ನು ಖಾತ್ರಿಗೊಳಿಸುತ್ತದೆ. ಇದು ಕೇವಲ 100 ಸೆಕೆಂಡುಗಳ ಅಂತರದಲ್ಲಿ ಬಳಕೆದಾರರಿಗೆ ತಾಜಾ ಗಾಳಿಯನ್ನು ಒದಗಿಸುತ್ತದೆ.
ಮುಂಬೈನ ಎಂಜಿನಿಯರಿಂಗ್ ವಿದ್ಯಾರ್ಥಿ ನಿಹಾಲ್ ಸಿಂಗ್ ಆದರ್ಶ್ ತಮ್ಮ ವ್ಯಾಟ್ ಟೆಕ್ನೋವೇಷನ್ಸ್ ಎಂಬ ಸ್ಟಾರ್ಟ್ಅಪ್ ಮೂಲಕ ಸೋಮಯ್ಯ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ರಿಸರ್ಚ್ ಇನ್ನೋವೇಶನ್ ಇನ್ಕ್ಯುಬೇಷನ್ ಡಿಸೈನ್ ಲ್ಯಾಬೊರೇಟರಿಯಲ್ಲಿ (ಆರ್ಐಐಡಿಎಲ್) ‘ಕೋವ್-ಟೆಕ್ ವೆಂಟಿಲೇಷನ್ ಸಿಸ್ಟಮ್’ ಎಂಬ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.