ಹೈದರಾಬಾದ್: ರಷ್ಯಾದ ಕೊರೋನಾವೈರಸ್ ಲಸಿಕೆ ಸ್ಪುಟ್ನಿಕ್ ವಿ ಎರಡನೇ ಬ್ಯಾಚ್ ಭಾನುವಾರ ಹೈದರಾಬಾದಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಸ್ಪುಟ್ನಿಕ್ ವಿ ಎರಡನೇ ಬ್ಯಾಚ್ ಭಾರತದ ಹೈದರಾಬಾದ್ಗೆ ಆಗಮಿಸಿದೆ. ಲಸಿಕೆ ಬಾಕ್ಸ್ ಗಳನ್ನು ವಿಮಾನದಿಂದ ಇಳಿಸಲಾಗುತ್ತಿದೆ” ಎಂದು ಸ್ಪುಟ್ನಿಕ್ ವಿ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ.
ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮೇ 14 ರಂದು ಈ ಆಮದು ಮಾಡಿದ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿಯ ಮೊದಲ ಡೋಸ್ ಅನ್ನು ಪ್ರಾಯೋಗಿಕವಾಗಿ ನೀಡಿದೆ. ಇದರ ಬೆಲೆ 948 ರೂ ಆಗಿದೆ. ಪ್ರತಿ ಡೋಸ್ಗೆ ಶೇಕಡಾ 5 ಜಿಎಸ್ಟಿ ಇದೆ.
‘ಭಾರತೀಯ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ರಷ್ಯಾದ ಲಸಿಕೆ ಯ ಆರಂಭ ಮಹತ್ವಪೂರ್ಣವಾಗಿದೆ. ಈ ಎರಡನೇ ವಿತರಣೆ ಬಹಳ ಸಮಯೋಚಿತವಾಗಿದೆ. ಸ್ಪುಟ್ನಿಕ್ ವಿ ಯ ಪರಿಣಾಮಕಾರಿತ್ವವು ವಿಶ್ವದಲ್ಲೇ ಪ್ರಸಿದ್ಧವಾಗಿದೆ ‘ಎಂದು ಭಾರತದ ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಟ್ವೀಟ್ ಮಾಡಿದ್ದಾರೆ.
ರಷ್ಯಾದ ನೇರ ಹೂಡಿಕೆ ನಿಧಿಯಿಂದ (ಆರ್ಡಿಐಎಫ್) 1.50 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಮೇ 1 ರಂದು ಭಾರತಕ್ಕೆ ತರಲಾಯಿತು ಮತ್ತು ಇದು ಕೇಂದ್ರ ಔಷಧ ಪ್ರಯೋಗಾಲಯದಿಂದ ಬಳಕೆಗೆ ಅನುಮತಿ ಪಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.