News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಸ್ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ಟಂಡನ್‌ ನೇಮಕ

ವಾಷಿಂಗ್ಟನ್:  ಯು.ಎಸ್ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಭಾರತೀಯ-ಅಮೇರಿಕನ್ ಮಹಿಳೆ ನೀರಾ ಟಂಡನ್ ಅವರನ್ನು ನೇಮಿಸಲಾಗಿದೆ. ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋಧದಿಂದಾಗಿ ವೈಟ್ ಹೌಸ್ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ನಿರ್ದೇಶಕರಾಗಿ ಅವರ ನಾಮನಿರ್ದೇಶನವನ್ನು ಹಿಂತೆಗೆದುಕೊಂಡ ಎರಡು ತಿಂಗಳ ನಂತರ ಅವರು ಹಿರಿಯ ಸಲಹೆಗಾರರಾಗಿ ನೇಂಕವಾಗಿದ್ದಾರೆ.

50 ವರ್ಷದ ಟಂಡನ್ ಅವರು ಸೋಮವಾರ ಶ್ವೇತಭವನಕ್ಕೆ ಸೇರ್ಪಡೆಯಾಗಲಿದ್ದಾರೆ.

ಟಂಡನ್ ಪ್ರಸ್ತುತ ಪ್ರಗತಿಪರ ಥಿಂಕ್-ಟ್ಯಾಂಕ್, ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ (ಸಿಎಪಿ) ಯ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ.

“ನೀರಾ ಅವರು ನಿಪುಣತೆ, ದೃಢತೆ ಮತ್ತು ರಾಜಕೀಯ ಬುದ್ಧಿವಂತಿಕೆಯಿಂದ ಬೈಡೆನ್ ಆಡಳಿತಕ್ಕೆ ಒಂದು ಆಸ್ತಿಯಾಗುತ್ತಾರೆ” ಎಂದು ಸಿಎಪಿ ಸಂಸ್ಥಾಪಕ ಮತ್ತು ನಿರ್ದೇಶಕ ಜಾನ್ ಪೊಡೆಸ್ಟಾ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top