ಹೈದರಾಬಾದ್: ಲಸಿಕೆ ನೀಡುವ ಆರಂಭದ ಸೂಚನೆ ಮತ್ತು ಸೀಮಿತ ಪ್ರಯೋಗದ ಭಾಗವಾಗಿ ರಷ್ಯಾ ಮೂಲದ ಸ್ಪುಟ್ನಿಕ್-ವಿ ಲಸಿಕೆಯ ಮೊದಲ ಡೋಸ್ ಅನ್ನು ಇಂದು ಹೈದರಾಬಾದ್‌ನಲ್ಲಿ ನೀಡಲಾಗಿದೆ.
ಡಾ. ರೆಡ್ಡಿ’ಸ್ ಲ್ಯಾಬೋರೇಟರಿಸ್ ಲಿಮಿಟೆಡ್ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ ಕಸೌಲಿಯಿಂದ ಲಸಿಕೆ ನೀಡಲು ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದೆ.
ಸೀಮಿತ ಪ್ರಯೋಗದ ಭಾಗವಾಗಿ ಸ್ಪುಟ್ನಿಕ್-ವಿ ಲಸಿಕೆ ನೀಡುವಿಕೆ ಆರಂಭಿಸಲಾಗಿದೆ ಎಂದಿದೆ.
ಆಮದು ಮಾಡಿದ ಲಸಿಕೆಯ ದರ 948 ರೂಪಾಯಿ ಮತ್ತು ಪ್ರತಿ ಡೋಸ್‌ಗೆ 5 ಪ್ರತಿಶತದಷ್ಟು ಜಿಎಸ್‌ಟಿ ಖರ್ಚಾಗುತ್ತದೆ ಎಂದು ಹೇಳಿದೆ.
ಸ್ಪುಟ್ನಿಕ್-ವಿ ಲಸಿಕೆಗಳ ಮೊದಲ ಸರಕು ಈ ತಿಂಗಳ 1 ರಂದು ಹೈದರಾಬಾದ್‌ಗೆ ಬಂದಿಳಿದಿತ್ತು ಮತ್ತು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಆಮದುಗಳನ್ನು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಪುಟ್ನಿಕ್-ವಿ ಯ ಸ್ಥಳೀಯ ಉತ್ಪಾದನೆ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಪ್ರಸ್ತುತ ಆರು ಭಾರತೀಯ ಉತ್ಪಾದನಾ ಪಾಲುದಾರರು ಸಮಯೋಚಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.