ಮಂಗಳೂರು: ಮೇ 13 ರಂದು ಅರಬ್ಬೀ ಸಮುದ್ರದಲ್ಲಿ ಟೌಕ್ಟೆ ಚಂಡಮಾರುತ ಏಳುವ ಸಂಭವವಿದ್ದು, ಯಾರೂ ಕಡಲಿಗಿಳಿಯದಂತೆ ಕರಾವಳಿ ಭದ್ರತಾ ಪಡೆ ಮತ್ತು ಪೊಲೀಸರು ಸೂಚನೆ ನೀಡಿದ್ದಾರೆ.
ಮೀನುಗಾರರು ಸೇರಿದಂತೆ ಯಾರೂ ಕಡಲಿಗಿಳಿಯದಂತೆ ಮತ್ತು ಈಗಾಗಲೇ ಮೀನುಗಾರಿಕೆಗೆ ತೆರಳಿರುವವರು ದಡ ಸೇರುವಂತೆಯೂ ಸೂಚಿಸಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಬಿರುಸಿನ ಗಾಳಿ ಮತ್ತು ಮಳೆ ಬೀಳುವ ಸಾಧ್ಯತೆ ಇದೆ ಎಂದು ಕೋಸ್ಟಲ್ ಗಾರ್ಡ್ ಎಚ್ಚರಿಕೆ ನೀಡಿದ್ದಾರೆ.
ಟೌಕ್ಟೆ ಚಂಡಮಾರುತ ಮೇ 16 ರ ವೇಳೆಗೆ ತನ್ನ ತೀವ್ರತೆಯನ್ನು ಹೆಚ್ಚಿಸುವ ಸಾಧ್ಯತೆ ಇದ್ದು, ಮೀನುಗಾರರು ಮತ್ತು ಕಡಲ ತಡಿಯಲ್ಲಿ ವಾಸವಿರುವವರು ಹೆಚ್ಚು ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಲಾಗಿದೆ.
#Mangaluru #Cyclone Coastal Security Police sending alert to fishermen asking them to return from the sea in view cyclonic storm formation in Arabian Sea. Cyclone Tauktae may intensify into a cyclonic storm by May 16 @XpressBengaluru @santwana99 pic.twitter.com/0C5tCEG34u
— vincent dsouza (@vinndz_TNIE) May 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.