News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕಾಗಿ USD 25 ಮಿಲಿಯನ್ ಹಣ ಸಂಗ್ರಹಿಸಿದೆ ಅಮೆರಿಕನ್ ಇಂಡಿಯಾ ಫೌಂಡೇಶನ್

ನವದೆಹಲಿ: ಕೊರೋನಾವೈರಸ್‌ನ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸಹಾಯ ಮಾಡುವ ಸಲುವಾಗಿ ಭಾರತೀಯ-ಅಮೆರಿಕನ್ ಲಾಭರಹಿತ ಸಂಸ್ಥೆ ಅಮೆರಿಕನ್ ಇಂಡಿಯಾ ಫೌಂಡೇಶನ್ (ಎಐಎಫ್) ಭಾರತಕ್ಕೆ 25 ಮಿಲಿಯನ್ ಯುಎಸ್‌ಡಿ ಹಣವನ್ನು ಸಂಗ್ರಹಿಸಿದೆ ಎಂದು ಅದರ ಕಾರ್ಯಕರ್ತರು ತಿಳಿಸಿದ್ದಾರೆ.

“ಇಲ್ಲಿಯವರೆಗೆ, ನಾವು 5,500 ಆಮ್ಲಜನಕ ಸಾಂದ್ರಕಗಳು, 2,300 ಆಸ್ಪತ್ರೆ ಹಾಸಿಗೆಗಳು, 25 ಆಮ್ಲಜನಕ ಸ್ಥಾವರಗಳು ಮತ್ತು 30,000 ವಿದ್ಯುತ್ ರಹಿತ ವೆಂಟಿಲೇಟರ್‌ಗಳಿಗೆ ಆದೇಶ ನೀಡಿದ್ದೇವೆ ಮತ್ತು ಅದನ್ನು ಪೂರೈಸಲು ಬದ್ಧರಾಗಿದ್ದೇವೆ” ಎಂದು ಅಮೆರಿಕನ್ ಇಂಡಿಯಾ ಫೌಂಡೇಶನ್‌ನ (ಎಐಎಫ್) ಸಿಇಒ ನಿಶಾಂತ್ ಪಾಂಡೆ ಬುಧವಾರ ತಿಳಿಸಿದ್ದಾರೆ.

ಅಂದಿನ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಉಪಕ್ರಮದಲ್ಲಿ ಗುಜರಾತ್ ಭೂಕಂಪದ ನಂತರ ಸ್ಥಾಪಿಸಲಾದ ಎಐಎಫ್ ಇದುವರೆಗೆ ಕೋವಿಡ್‌ ವಿರುದ್ಧ ಹೋರಾಡಲು 25 ಮಿಲಿಯನ್ ಯುಎಸ್‌ಡಿ ಹಣವನ್ನು ಸಂಗ್ರಹಿಸಿದೆ, ಇದು ಭಾರತೀಯ-ಅಮೆರಿಕನ್ ಲಾಭರಹಿತ ಸಂಸ್ಥೆ ಸಂಗ್ರಹಿಸಿದ ಅತ್ಯಧಿಕ ಮೊತ್ತವಾಗಿದೆ.

ಸೇವಾ ಇಂಟರ್ನ್ಯಾಷನಲ್ ಯುಎಸ್ಎ ಇದುವರೆಗೆ 17 ಮಿಲಿಯನ್ ಯುಎಸ್‌ಡಿ ಹಣವನ್ನು ಸಂಗ್ರಹಿಸಿದೆ.

“ಎಐಎಫ್‌ನ ದೃಷ್ಟಿಕೋನದಲ್ಲಿ ಕೋವಿಡ್ ಪ್ರತಿಕ್ರಿಯೆ ಅಪಾರ ಮತ್ತು ವಿನಮ್ರವಾಗಿದೆ. ನಾವು ಸದಾ ಭಾರತೀಯ-ಅಮೆರಿಕನ್ ವಲಸೆಗಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಆದರೆ ಈಗ ನಾವು ನೋಡುತ್ತಿರುವುದು ಎಲ್ಲವನ್ನೂ ಮೀರಿದೆ ಮತ್ತು ಈ ಹಿಂದೆ ಎಐಎಫ್‌ಗೆ ಸಂಪರ್ಕ ಹೊಂದಿಲ್ಲದ ಸಮುದಾಯವನ್ನು ಕೂಡ ಇದು ಒಳಗೊಂಡಿದೆ” ಎಂದು ಪಾಂಡೆ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top