ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಕೊರೋನಾವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ, ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವ ಅನಿವಾರ್ಯತೆ ದೊಡ್ಡ ಮಟ್ಟದಲ್ಲಿ ಇದೆ. ಆಮ್ಲಜನಕ ಸಿಲಿಂಡರ್‌ಗಳು ಮತ್ತು ಸಾಂದ್ರಕಗಳು, ಆಸ್ಪತ್ರೆಯ ಹಾಸಿಗೆಗಳು ಮತ್ತು ಔಷಧಿಗಳಂತಹ ಸಂಪನ್ಮೂಲಗಳಿಗೆ ಭಾರತದ ಅನೇಕ ಭಾಗಗಳಲ್ಲಿ ಕೊರತೆ ಮುಂದುವರೆದಿದೆ. ಈ ಸನ್ನಿವೇಶದಲ್ಲಿ, ಆಮ್ಲಜನಕ ಸಾಂದ್ರತೆಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತೇವೆ ಎಂದು ಓಲಾ ಘೋಷಿಸಿದೆ.
ಇದಕ್ಕಾಗಿ ಓಲಾ ಕಂಪನಿಯು ಗಿವ್‌ಇಂಡಿಯಾದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದು, ದೇಶಾದ್ಯಂತ 10,000 ಆಮ್ಲಜನಕ ಸಾಂದ್ರಕಗಳನ್ನು ಓಲಾ ಉಚಿತವಾಗಿ ತಲುಪಿಸುವ ಕಾರ್ಯ ಮಾಡಲಿದೆ.
ಟ್ವೀಟ್‌ನಲ್ಲಿ ಇದನ್ನು ಘೋಷಿಸಿರುವ ಓಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್ ಅಗರ್‌ವಾಲ್ ಅವರು, “ಈ ಕಠಿಣ ಕಾಲದಲ್ಲಿ ನಾವು ಒಗ್ಗೂಡಿ ನಮ್ಮ ಸಮುದಾಯಗಳಿಗೆ ಸಹಾಯ ಮಾಡಬೇಕಿದೆ. ಇಂದು ನಾವು ಆಕ್ಸಿಜನ್‌ಗೆ ಉಚಿತ ಮತ್ತು ಸುಲಭ ಪ್ರವೇಶವನ್ನು ಒದಗಿಸಲು ಗಿವ್ ಇಂಡಿಯಾ ಸಹಭಾಗಿತ್ವದಲ್ಲಿ ‘ಒ 2 ಫಾರ್ ಇಂಡಿಯಾ’ ಉಪಕ್ರಮವನ್ನು ಘೋಷಿಸುತ್ತಿದ್ದೇವೆ. ಅಗತ್ಯವಿರುವವರಿಗೆ ಆಮ್ಲಜನಕ ಸಾಂದ್ರಕಗಳನ್ನು ಪೂರೈಸುವ ಯೋಜನೆ ಇದಾಗಿದೆ ” ಎಂದಿದ್ದಾರೆ.
Thank you Honourable Deputy CM @drashwathcn ji. Really appreciate your and Karnataka government’s support towards our #O2forIndia initiative. We look forward to scaling this across the country in the coming weeks. @Olacabs @foundation_ola https://t.co/kCfvSEgIcY
— Bhavish Aggarwal (@bhash) May 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.