ಬೆಂಗಳೂರು: ಆಕ್ಸಿಜನ್ ಫಾರ್ ಇಂಡಿಯಾ ಅಭಿಯಾನದಡಿ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಗೆ 150 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಮತ್ತು 1 ಆಕ್ಸಿಜನ್ ಪ್ಲ್ಯಾಂಟ್ ಅನ್ನು ಒದಗಿಸಿಕೊಟ್ಟ ಪೇಟಿಎಂಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದ್ದು, ಸೋಂಕಿತರ ಚಿಕಿತ್ಸೆಗೆ ಅಗತ್ಯ ಆಮ್ಲಜನಕದ ಕೊರತೆಯೂ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಸಹ ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಅದರೊಂದಿಗೆ ಪೇಟಿಎಂ ನಂತಹ ಸಂಸ್ಥೆಗಳು ಸಹ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಕೃತಜ್ಞತೆ ತಿಳಿಸಿದ್ದಾರೆ.
ಪೇಟಿಎಂ ನ ಸಿಇಒ ವಿಜಯ್ ಶೇಖರ್ ಅವರ ಸಹಕಾರದಿಂದ ಬೆಂಗಳೂರು ದಕ್ಷಿಣ ವಲಯಕ್ಕೆ ಆಕ್ಸಿಜನ್ ನೆರವನ್ನು ಪೇಟಿಎಂ ಒದಗಿಸಿದ್ದು, ಅವರಿಗೂ ಸಂಸದರು ಅಭಿನಂದನೆ ತಿಳಿಸಿದ್ದಾರೆ.
On behalf of Bengaluru South, I thank @Paytm Foundation for committing 150 Oxygen Concentrators & an Oxygen Plant for Bengaluru under its #OxygenForIndia initiative
I also extend my warmest gratitude to Paytm CEO Sri @vijayshekhar for joining our efforts in #FightAgainstCOVID pic.twitter.com/zjUzPiWVtj
— Tejasvi Surya (@Tejasvi_Surya) May 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.