ನವದೆಹಲಿ: ಕೊರೋನಾ ಲಸಿಕೆ ಖರೀದಿ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ 35 ಸಾವಿರ ಕೋಟಿ ರೂ. ಬಳಕೆ ಮಾಡುತ್ತಿದೆ. ಈ ಅನುದಾನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿಯೂ ತಡೆಯೊಡ್ಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಕೊರೋನಾ ಲಸಿಕೆಗಳಿಗಾಗಿ ವರ್ಗಾವಣೆ ಹೆಸರಿನಲ್ಲಿ 35 ಸಾವಿರ ಕೋಟಿ ರೂ. ಗಳನ್ನು ಒದಗಿಸುತ್ತಿದ್ದು, ಈ ಸಂಬಂಧ ಹಣಕಾಸು ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
2021 ರ ಎಪ್ರಿಲ್ನಿಂದ ಆರಂಭವಾಗಿರುವ ಈ ಆರ್ಥಿಕ ವರ್ಷದಲ್ಲಿ ಡಿಮಾಂಡ್ ಗ್ರ್ಯಾಂಟ್ಸ್ ಅಡಿಯಲ್ಲಿ ನೀಡಲಾಗಿದ್ದು, ರಾಜ್ಯಗಳಿಗೆ ವರ್ಗಾವಣೆಯನ್ನು ಹಲವಾರು ಆಡಳಿತಾತ್ಮಕ ಅನುಕೂಲಗಳಿಗೆ ತ್ರೈಮಾಸಿಕ ನಿಯಂತ್ರಣಕ್ಕೆ ವಿನಾಯಿತಿ ನೀಡಲಾಗಿದೆ. ಕೇಂದ್ರ ಲಸಿಕೆಗಳನ್ನು ಸಂಗ್ರಹ ಮಾಡಿ, ರಾಜ್ಯಗಳಿಗೆ ಅನುದಾನದ ರೂಪದಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಲಸಿಕೆ ಸಂಬಂಧ ಯಾವುದೇ ವೆಚ್ಚ ಮಾಡಲು ಕೇಂದ್ರ ಸರ್ಕಾರಕ್ಕೆ ಅನುಮತಿ ಇಲ್ಲ ಎಂಬ ವಾದವನ್ನು ಹಣಕಾಸು ಇಲಾಖೆ ತಿರಸ್ಕರಿಸಿದ್ದು, ಕೇಂದ್ರ ಸರ್ಕಾರ ಲಸಿಕೆಗಳನ್ನು ಖರೀದಿಸಿ ಪಾವತಿ ಮಾಡುತ್ತದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.