ನವದೆಹಲಿ: ಮಾರ್ಚ್ 2022 ರೊಳಗಾಗಿ ರಷ್ಯಾದಿಂದ ಸುಮಾರು 361 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಲಸಿಕೆಗಳು ಭಾರತಕ್ಕೆ ಬರಲಿದ್ದು, ಅಂದಾಜು 36 ಕೋಟಿ ಭಾರತೀಯರಿಗೆ ಅದನ್ನು ನೀಡಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಮೇ 1 ರಂದು 1.5 ಮಿಲಿಯನ್ ಡೋಸ್ ಲಸಿಕೆಗಳು ಭಾರತಕ್ಕೆ ಆಮದಾಗಿದೆ. ಎರಡನೇ ಹಂತದಲ್ಲಿ ಮೊದಲ ಹಂತದಲ್ಲಿ ಭಾರತಕ್ಕೆ ಬಂದಷ್ಟೇ ಲಸಿಕೆಗಳು ಶೀಘ್ರದಲ್ಲೇ ರವಾನೆಯಾಗಲಿದೆ. ಮೇ ತಿಂಗಳಲ್ಲಿ 3 ಮಿಲಿಯನ್, ಜೂ. 5 ಮಿಲಿಯನ್ ಮತ್ತು ಜುಲೈ ತಿಂಗಳಲ್ಲಿ 10 ಮಿಲಿಯನ್ ಲಸಿಕೆಗಳು ಭಾರತಕ್ಕೆ ಬರಲಿವೆ. ಒಟ್ಟು 18 ಮಿಲಿಯನ್ ಸ್ಪುಟ್ನಿಕ್-ವಿ ಲಸಿಕೆಗಳನ್ನು ಭಾರತ ಪಡೆಯಲಿದೆ.
ಈ ಲಸಿಕೆಗೆ ರಷ್ಯಾದ ಸಾರ್ವಭೌಮತ್ವ ಸಂಪತ್ತು ನಿಧಿ ಹಣ ನೀಡಿದೆ. 850 ಮಿಲಿಯನ್ ಡೋಸ್ ಉತ್ಪಾದನೆಗೆ ಸಂಬಂಧಿಸಿದಂತೆ ಭಾರತ ಐದು ಔಷಧಿ ತಯಾರಕ ಕಂಪನಿಗಳ ಜೊತೆಗೆ ಒಪ್ಪಂದ ಸಹ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.