ನವದೆಹಲಿ: ಕೊರೋನಾ ಸೋಂಕಿತರ ಚಿಕಿತ್ಸೆ ಹಿನ್ನೆಲೆಯಲ್ಲಿ ಎಪ್ರಿಲ್ 19 ರಿಂದ ತೊಡಗಿದಂತೆ ಈ ವರೆಗೆ ವಿವಿಧ ರಾಜ್ಯಗಳಿಗೆ 268 ಕ್ಕೂ ಅಧಿಕ ಟ್ಯಾಂಕರ್ಗಳಲ್ಲಿ ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ.
ಈವರೆಗೆ 68 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ಆಮ್ಲಜನಕ ಸಾಗಾಟ ಮಾಡುವ ತಮ್ಮ ಕಾರ್ಯವನ್ನು ಸಂಪೂರ್ಣಗೊಳಿಸಿದೆ ಎಂದು ಇಲಾಖೆ ತಿಳಿಸಿದೆ. ಮಹಾರಾಷ್ಟ್ರಕ್ಕೆ 293, ಉತ್ತರ ಪ್ರದೇಶ 1230, ಮಧ್ಯಪ್ರದೇಶ 271, ಹರಿಯಾಣ 555, ತೆಲಂಗಾಣ 123, ರಾಜಸ್ಥಾನ 40, ದೆಹಲಿಗೆ 1679 ಟನ್ ಧ್ರುವೀಕೃತ ಆಮ್ಲಜನಕ ರವಾನಿಸಲಾಗಿದೆ.
ಕಾನ್ಪುರಕ್ಕೆ 80 ಟನ್ ಆಕ್ಸಿಜನ್ ರವಾನಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳಿಗೆ ಹೆಚ್ಚಿನ ಲೋಡೆಡ್ ಆಕ್ಸಿಜನ್ ಎಕ್ಸ್ಪ್ರೆಸ್ಗಳು ತಡರಾತ್ರಿ ಪ್ರಯಾಣ ಆರಂಭಿಸಿರುವುದಾಗಿ ತಿಳಿಸಿದೆ. ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಅಭಾವ ಎದುರಾಗದಂತೆ ಅಗತ್ಯ ಕ್ರಮ ವಹಿಸುವ ನಿಟ್ಟಿನಲ್ಲಿ ಇಲಾಖೆ ಈ ಅಗತ್ಯ ಸೇವೆ ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.