ನವದೆಹಲಿ: ಆಯುಷ್ ಸಚಿವಾಲಯವು ಆಸ್ಪತ್ರೆಯಲ್ಲಿರುವ ಕೋವಿಡ್ -19 ರೋಗಿಗಳಿಗೆ ತನ್ನ ಪಾಲಿ ಹರ್ಬಲ್ ಆಯುರ್ವೇದ ಔಷಧಿಗಳಾದ ಆಯುಷ್ 64 ಮತ್ತು ಕಬಾಸುರಾ ಕುಡಿನೀರ್ ವಿತರಿಸುವ ಬೃಹತ್ ಅಭಿಯಾನವನ್ನು ಪ್ರಾರಂಭಿಸಿದೆ. ಮಲ್ಟಿ-ಸೆಂಟರ್ ಕ್ಲಿನಿಕಲ್ ಪ್ರಯೋಗಗಳ ಮೂಲಕ ಈ ಔಷಧಿಗಳ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಔಷಧಿಗಳು ಅಗತ್ಯವಿರುವವರಿಗೆ ಪಾರದರ್ಶಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ತಲುಪುವಂತೆ ನೋಡಿಕೊಳ್ಳಲು ಕೇಂದ್ರ ಸಚಿವ ಕಿರೆನ್ ರಿಜ್ಜು ಅವರು ಇತರರ ಜೊತೆಗೂಡಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಇಂಟರ್ ಡಿಸಿಪ್ಲೇನರಿ ಆಯುಷ್ ಆರ್ & ಡಿ ಕಾರ್ಯಪಡೆಯ ಅಧ್ಯಕ್ಷ ಪ್ರೊಫೆಸರ್ ಭೂಷಣ್ ಪಟ್ವರ್ಧನ್ ಈ ಬಗ್ಗೆ ಮಾತನಾಡಿ, ಆಯುಷ್ -64 ಕೋವಿಡ್ ರೋಗಿಗಳು ಬೇಗ ಆಸ್ಪತ್ರೆಯಿಂದ ಹೊರಬರುವಂತೆ ಮಾಡುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಿ ತೋರಿಸಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.