News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದೇ ಮೊದಲು : ಪಾಕಿಸ್ಥಾನದ ಪಿಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿಂದೂ ಮಹಿಳೆ

ಇಸ್ಲಾಮಾಬಾದ್‌: ಇದೇ ಮೊದಲ ಬಾರಿಗೆ ಪಾಕಿಸ್ಥಾನದ ಹಿಂದೂ ಮಹಿಳೆಯೊಬ್ಬರು ಆ ದೇಶದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು ಪ್ರತಿಷ್ಠಿತ ಪಾಕಿಸ್ಥಾನ ಆಡಳಿತ ಸೇವೆಗಳಿಗೆ (ಪಿಎಎಸ್) ಆಯ್ಕೆಯಾಗಿದ್ದಾರೆ.

ಸನಾ ರಾಮಚಂದ್ ಎಂಬಿಬಿಎಸ್ ವೈದ್ಯರಾಗಿದ್ದು, ಪಾಕಿಸ್ಥಾನದಲ್ಲಿ ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಸಿಂಧ್ ಪ್ರಾಂತ್ಯದ ಶಿಕಾರ್‌ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದವರು.

ಸಿಎಸ್ಎಸ್ ಲಿಖಿತ ಪರೀಕ್ಷೆಯಲ್ಲಿ ಹಾಜರಾದ 18,553 ಜನರಲ್ಲಿ ತೇರ್ಗಡೆಯಾದ 221 ಅಭ್ಯರ್ಥಿಗಳಲ್ಲಿಇವರು ಕೂಡ ಒಬ್ಬರು. ವಿಸ್ತಾರವಾದ ವೈದ್ಯಕೀಯ, ಮಾನಸಿಕ ಮತ್ತು ಮೌಖಿಕ ಪರೀಕ್ಷೆಗಳ ನಂತರ ಅಂತಿಮ ಆಯ್ಕೆ ಮಾಡಲಾಗಿದೆ.

ಸಿಎಸ್ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪಿಎಎಸ್‌ಗೆ ಆಯ್ಕೆಯಾದ ಮೊದಲ ಹಿಂದೂ ಮಹಿಳೆ ರಾಮ್‌ಚಂದ್ ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

ಒಟ್ಟು 79 ಮಹಿಳೆಯರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಅವರಿಗೆ ಪಿಎಎಸ್ ಸೇರಿದಂತೆ ವಿವಿಧ ಗುಂಪುಗಳನ್ನು ನೀಡಲಾಗಿದೆ ಎನ್ನಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top