News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಪಿ: ಗ್ರಾಮ ಪ್ರಧಾನ್ ಆದ 21 ವರ್ಷದ ವಿದ್ಯಾರ್ಥಿನಿ ಅರುಷಿ ಸಿಂಗ್

ಗೊಂಡಾ: ಲಕ್ನೋ ವಿಶ್ವವಿದ್ಯಾಲಯದ 21 ವರ್ಷದ ವಿದ್ಯಾರ್ಥಿನಿ ಅರುಷಿ ಸಿಂಗ್ ಅವರು ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ವಾಜಿರ್‌ಗಂಜ್ ಬ್ಲಾಕ್‌ನ ಸೆಹೆರಿಯಾ ಗ್ರಾಮದ ಗ್ರಾಮ ಪ್ರಧಾನ್ ಆಗಿ ಆಯ್ಕೆಯಾಗಿದ್ದಾರೆ.

ಲಕ್ನೋ ವಿಶ್ವವಿದ್ಯಾಲಯದ ಅಂಗಸಂಸ್ಥೆ ಕಾಲೇಜಾದ ಸಿಟಿ ಲಾ ಕಾಲೇಜಿನಲ್ಲಿ ಬಿಎ ಎಲ್‌ಎಲ್‌ಬಿ ಕೋರ್ಸ್ ಓದುತ್ತಿರುವ ಸಿಂಗ್ ಅವರನ್ನು 384 ಮತಗಳೊಂದಿಗೆ ವಿಜೇತರಾಗಿ ಘೋಷಿಸಲಾಯಿತು. ಈ ಹುದ್ದೆಗೆ ನಾಲ್ಕು ಸ್ಪರ್ಧಿಗಳು ಸ್ಪರ್ಧಿಸಿದ್ದರು.

ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಮಾರ್ಚ್ 2ರಿಂದ ಮನೆ ಮನೆ ಅಭಿಯಾನವನ್ನು ಪ್ರಾರಂಭಿಸಿದ್ದ ಅರುಷಿ ಅವರು, ತನ್ನ ಕುಟುಂಬದಿಂದ ಅಪಾರ ಬೆಂಬಲವನ್ನು ಪಡೆದಿದ್ದಾರೆ.

“ಇಂದು ಒಂದು ಕನಸು ನನಸಾದಂತಿದೆ. ಮಧ್ಯಾಹ್ನ 1.30 ರ ಸುಮಾರಿಗೆ ನನ್ನನ್ನು ವಿಜೇತರೆಂದು ಘೋಷಿಸಲಾಯಿತು. ತಕ್ಷಣವೇ ಸ್ನೇಹಿತರು ಮತ್ತು ಸಂಬಂಧಿಕರು ಕರೆ ಮಾಡಲು ಪ್ರಾರಂಭಿಸಿದರು. ಗೊಂಡಾವನ್ನು ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಉತ್ತಮ ಸಾರ್ವಜನಿಕ ಸೇವೆಯನ್ನು ಹೊಂದಿರುವ ಸ್ಮಾರ್ಟ್ ಹಳ್ಳಿಯನ್ನಾಗಿ ಮಾಡುವುದು ನನ್ನ ಕರ್ತವ್ಯ” ಎಂದು ಸಿಂಗ್ ಮಾಧ್ಯಮಗಳಿಗೆ ಹೇಳಿದ್ದಾರೆ.

“ನನ್ನ ಅಜ್ಜಿ, ವಿದ್ಯಾವತಿ ಸಿಂಗ್ 2000 ರಲ್ಲಿ ಈ ಹುದ್ದೆಗಾಗಿ ಚುನಾವಣೆಯಲ್ಲಿ ಗೆದ್ದರು ಮತ್ತು ಅವರ ಮೊದಲು ನನ್ನ ಮುತ್ತಜ್ಜ ಇಲ್ಲಿ ಚುನಾವಣೆಯಲ್ಲಿ ಗೆದ್ದಿದರು. ಇದು 1500 ಜನಸಂಖ್ಯೆಯ ಸಣ್ಣ ಹಳ್ಳಿ. ಮತ್ತು ಹಳ್ಳಿ ಜನರು ನಮ್ಮನ್ನು ಪ್ರೀತಿಸುತ್ತಾರೆ. ಕುಟುಂಬದ ಪರಂಪರೆಯನ್ನು ಮುಂದೆ ಸಾಗಿಸಲು ನನಗೆ ಸಂತೋಷವಾಗುತ್ತಿದೆ ” ಎಂದಿದ್ದಾರೆ.

ಇವರ ತಾಯಿ ಗರಿಮಾ ಸಿಂಗ್ ಸಿವಿಲ್ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶರ ರೀಡರ್ ಆಗಿದ್ದು, ಆಕೆಯ ತಂದೆ ಧರ್ಮೇಂದ್ರ ಸಿಂಗ್ ಅವರು ಲಕ್ನೋದಲ್ಲಿ ಪೊಲೀಸ್ ಆಯುಕ್ತರ ಪಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಳ್ಳಿಗಾಗಿ ತನ್ನ ಅಭಿವೃದ್ಧಿ ಯೋಜನೆಗಳನ್ನು ಹಂಚಿಕೊಂಡ ಸಿಂಗ್ “ಮೊದಲು ನಾನು ಬಾಲಕಿಯರ ಮತ್ತು ಹುಡುಗರ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಮೇಲೆ‌ ಗಮನ ಕೇಂದ್ರೀಕರಿಸುತ್ತೇನೆ ಮತ್ತು ಆರೋಗ್ಯ ಮತ್ತು ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಿ ಶೌಚಾಲಯಗಳನ್ನು ನಿರ್ವಹಿಸುತ್ತೇನೆ. ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಸುಧಾರಣೆಯ ಬಗ್ಗೆ ನಾನು ಗಮನ ಹರಿಸುತ್ತೇನೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top