News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೋವಿಡ್‌ ಜಾಗತಿಕ ಪಡೆ ಸಮಿತಿಗೆ ಸೇರ್ಪಡೆಗೊಂಡ ಭಾರತೀಯ ಅಮೆರಿಕನ್ ಸಿಇಒಗಳು

ವಾಷಿಂಗ್ಟನ್: ಗೂಗಲ್‌ನ ಮೂವರು ಭಾರತೀಯ-ಅಮೆರಿಕನ್ ಸಿಇಒಗಳಾದ ಸುಂದರ್ ಪಿಚೈ, ಡೆಲಾಯ್ಟ್‌ನ ಪುನಿತ್ ರೆಂಜನ್ ಮತ್ತು ಅಡೋಬ್‌ನ ಶಾಂತನು ನಾರಾಯೆಣ್ ಅವರು ಸಾಂಕ್ರಾಮಿಕ ಪ್ರತಿಕ್ರಿಯೆ ಕುರಿತ ಜಾಗತಿಕ ಕಾರ್ಯಪಡೆಯ ಸಮಿತಿಗೆ ಸೇರಿದ್ದಾರೆ.

ಈ ಸಮಿತಿಯು ಭಾರತಕ್ಕೆ ಕೋವಿಡ್-‌19 ವಿರುದ್ಧ ಯಶಸ್ವಿಯಾಗಿ ಹೋರಾಡಲು ಸಹಾಯ ಮಾಡುವ  ಕಾರ್ಪೊರೇಟ್ ವಲಯದ ಉಪಕ್ರಮವನ್ನು ನೋಡಿಕೊಳ್ಳುತ್ತಿದೆ.

ಮೂವರು ಭಾರತೀಯ-ಅಮೆರಿಕನ್ ಸಿಇಒಗಳ ಹೆಸರನ್ನು ಗುರುವಾರ ಸಮಿತಿಯ ಪಟ್ಟಿಗೆ ಸೇರಿಸಲಾಗಿದೆ.

ಭಾರತದಲ್ಲಿನ ಕೋವಿಡ್-19 ಬಿಕ್ಕಟ್ಟಿನ ಬಗ್ಗೆ ಯುಎಸ್ ಕಂಪನಿಗಳ ಬೆಂಬಲ ಸಂಘಟಿಸುವಲ್ಲಿ ಮೂವರು ಈ ಸಿಇಒಗಳು ಸಕ್ರಿಯರಾಗಿದ್ದಾರೆ.

ಗುರುವಾರ ಈ ಪಟ್ಟಿಗೆ ಸೇರ್ಪಡೆಗೊಂಡ ಇತರರೆಂದರೆ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್, ಬಿಸಿನೆಸ್ ರೌಂಡ್‌ಟೇಬಲ್ ಅಧ್ಯಕ್ಷ ಮತ್ತು ಸಿಇಒ ಜೋಶುವಾ ಬೋಲ್ಟನ್ ಮತ್ತು ಯುಎಸ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಮತ್ತು ಸಿಇಒ ಸುಝನೆ ಕ್ಲಾರ್ಕ್.

ಟಾಸ್ಕ್ ಫೋರ್ಸ್, ಯುಎಸ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿರುವ ಹೊಸದಾಗಿ ರೂಪುಗೊಂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವವಾಗಿದೆ ಮತ್ತು ಇದನ್ನು ಬಿಸಿನೆಸ್ ರೌಂಡ್‌ಟೇಬಲ್ ಬೆಂಬಲಿಸುತ್ತದೆ.

ಯುಎಸ್ ಕಾರ್ಪೊರೇಟ್ ವಲಯವು ಈವರೆಗೆ ಭಾರತಕ್ಕಾಗಿ 25 ಸಾವಿರಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳನ್ನು ಪೂರೈಕೆ ಮಾಡಿದೆ. ಡೆಲಾಯ್ಟ್ ಒದಗಿಸಿದ ಮೊದಲ 1,000 ಆಮ್ಲಜನಕ ಸಾಂದ್ರಕಗಳು ಫೆಡ್ಎಕ್ಸ್‌ನ ನಿರ್ಣಾಯಕ ವ್ಯವಸ್ಥಾಪನಾ ಬೆಂಬಲದೊಂದಿಗೆ ಏಪ್ರಿಲ್ 25 ರಂದು ಭಾರತಕ್ಕೆ ಬಂದವು.

ಈ ಸಾಂದ್ರಕಗಳನ್ನು ತಕ್ಷಣದ ಬಳಕೆಗಾಗಿ ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳಿಗೆ ರವಾನಿಸಲಾಗುವುದು ಎಂದು ಕಾರ್ಯಪಡೆ ತಿಳಿಸಿದೆ.

ವೆಂಟಿಲೇಟರ್‌ಗಳ ಮೊದಲ ಸಾಗಣೆ ಈ ವಾರದ ಆರಂಭದಲ್ಲಿ ಭಾರತಕ್ಕೆ ಬಂದಿಳಿಯಿತು. ಎಲ್ಲಾ 1,000 ವೆಂಟಿಲೇಟರ್‌ಗಳು ಜೂನ್ 3 ರೊಳಗೆ ಭಾರತವನ್ನು ತಲುಪುವ ನಿರೀಕ್ಷೆಯಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top