News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈಲ್ವೆ ಇದುವರೆಗೆ 2511 ಮೆ.ಟನ್ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ತಲುಪಿಸಿದೆ

ನವದೆಹಲಿ: ಭಾರತೀಯ ರೈಲ್ವೆ ಇದುವರೆಗೆ 161 ಟ್ಯಾಂಕರ್‌ಗಳಲ್ಲಿ 2511 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ. ನಲವತ್ತು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು ಈಗಾಗಲೇ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ. ವಿನಂತಿ ಬಂದ ರಾಜ್ಯಗಳಿಗೆ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲು ಭಾರತೀಯ ರೈಲ್ವೆ ಪ್ರಯತ್ನ ನಿರಂತರವಾಗಿ ಸಾಗಿದೆ.

ಇಲ್ಲಿಯವರೆಗೆ, ಮಹಾರಾಷ್ಟ್ರಕ್ಕೆ 174 ಮೆ.ಟನ್, ಯುಪಿಗೆ 689 ಮೆ.ಟನ್, ಮಧ್ಯಪ್ರದೇಶಕ್ಕೆ 190 ಮೆ.ಟನ್, ಹರಿಯಾಣಕ್ಕೆ 259 ಮೆ.ಟನ್, ತೆಲಂಗಾಣಕ್ಕೆ 123 ಮೆ.ಟನ್ ಮತ್ತು ದೆಹಲಿಗೆ 1053 ಮೆ.ಟನ್ ಆಮ್ಲಜನಕ ಸಾಗಾಟ ಮಾಡಲಾಗಿದೆ.

ಪ್ರಸ್ತುತ 22 ಟ್ಯಾಂಕರ್‌ಗಳು 400 ಟನ್‌ಗಿಂತ ಹೆಚ್ಚು  ಆಮ್ಲಜನವನ್ನು ಹೊತ್ತು ಸಾಗುತ್ತಿವೆ, ಇವು ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಗೆ ತಲುಪುವ ನಿರೀಕ್ಷೆ ಇದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top