News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

900 ಆಕ್ಸಿಜನ್ ಸಿಲಿಂಡರ್‌ಗಳನ್ನು ಬ್ರಿಟನ್‌ನಿಂದ ಭಾರತಕ್ಕೆ ಹೊತ್ತು ತಂದ ವಾಯುಸೇನೆ

ನವದೆಹಲಿ: ಬ್ರಿಟಿಷ್ ಆಕ್ಸಿಜನ್ ಕಂಪನಿ ಭಾರತಕ್ಕೆ ನೀಡಿರುವ 900 ಆಕ್ಸಿಜನ್ ಸಿಲಿಂಡರ್‌ಗಳ ಮೊದಲ ಬ್ಯಾಚ್ ಅನ್ನು ಭಾರತೀಯ ವಾಯುಪಡೆ ಸೋಮವಾರ ಭಾರತಕ್ಕೆ ಹೊತ್ತು ತಂದಿದೆ. ಕೋವಿಡ್-19  ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಭಾರತದ ಹೋರಾಟದಲ್ಲಿಸಹಾಯ ಮಾಡಲು ಬ್ರಿಟಿಷ್ ಆಕ್ಸಿಜನ್ ಕಂಪನಿ 5000 ಆಮ್ಲಜನಕ ಸಿಲಿಂಡರ್‌ಗಳನ್ನು ಭಾರತಕ್ಕೆ ನೀಡಿದೆ.

ಲಂಡನ್‌ನಲ್ಲಿನ ಭಾರತದ ಹೈ ಕಮಿಷನ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, “5000 ಆಕ್ಸಿಜನ್ ಸಿಲಿಂಡರ್‌ (46 ಲೀ.) ಗಳನ್ನು ಬ್ರಿಟಿಷ್‌ ಆಕ್ಸಿಜನ್‌ ಕಂಪನಿ ಉಚಿತವಾಗಿ ನೀಡಿದೆ. ಮೊದಲ ಬ್ಯಾಚ್‌ನ 900 ಸಿಲಿಂಡರ್‌ಗಳನ್ನು ಭಾರತಕ್ಕೆ ಇಂದು ಬೆಳಿಗ್ಗೆ ಭಾರತೀಯ ವಾಯುಸೇನಾ ವಿಮಾನ ಹೊತ್ತು ಹಾರಿದೆ” ಎಂದಿದೆ.

ಕರೋನವೈರಸ್‌ನ ಎರಡನೇ ಅಲೆಯ ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುವ ಬದ್ಧತೆಯ ಭಾಗವಾಗಿ ಯುಕೆ  ಹೆಚ್ಚುವರಿ 1,000 ವೆಂಟಿಲೇಟರ್‌ಗಳನ್ನು ಭಾರತೀಯ ಆಸ್ಪತ್ರೆಗಳಿಗೆ ಕಳುಹಿಸುವುದಾಗಿ ಭಾನುವಾರ ಘೋಷಿಸಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top