ನವದೆಹಲಿ: ಕೊರೋನಾ ಸೋಂಕಿನಿಂದಾಗಿ ಇಡೀ ದೇಶವೇ ಮತ್ತೊಮ್ಮೆ ನಲುಗಿ ಹೋಗಿದೆ. ಇಂತಹ ಸಂಕಷ್ಟದ ಅವಧಿಯಲ್ಲಿ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಜನತೆಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ಮೇ, ಜೂನ್ ತಿಂಗಳಿನಲ್ಲಿ ಉಚಿತ ಪಡಿತರ ನೀಡಲು ಮುಂದಾಗಿದೆ.
ಕೇಂದ್ರ ಸರ್ಕಾರ ಬಡವರ ಕಲ್ಯಾಣಕ್ಕಾಗಿ, ಅವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಈ ಹಿಂದೆಯೇ ಆರಂಭಿಸಿದ್ದು, ಈ ಯೋಜನೆಯಡಿ ಬಡವರಿಗೆ ಮುಂದಿನ ಎರಡು ತಿಂಗಳುಗಳ ಕಾಲ ಉಚಿತ ಪಡಿತರ ನೀಡಲು ಮುಂದಾಗಿದೆ. 80 ಕೋಟಿ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದು, ಇದಕ್ಕಾಗಿ ಸರ್ಕಾರ ಸುಮಾರು 26 ಸಾವಿರ ಕೋಟಿ ರೂ. ಗಳನ್ನು ವ್ಯಯಿಸಲಿದೆ.
ಕಳೆದ ಬಾರಿ ಕೊರೋನಾ ಲಾಕ್ಡೌನ್ ಸಂದರ್ಬದಲ್ಲಿ ದೇಶದ ಬಡ ವರ್ಗ, ಕೂಲಿ, ವಲಸೆ ಕಾರ್ಮಿಕರು ಸೇರಿದಮತೆ ಇನ್ನೂ ಹಲವರು ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಕೊರೋನಾ ಎರಡನೇ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆ ರೂಪಿಸಿದೆ.
GOI decides to provide free foodgrains under #PMGaribKalyanAnnaYojana for May & June 2021. Around 80 crore benefiaries will be provided 5 kg free food grains. Govt to spend over Rs 26,000 crore on this initiative. A great relief to crores of families . Thank You PM @narendramodi
— B L Santhosh (@blsanthosh) April 23, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.