ನವದೆಹಲಿ: ದಕ್ಷಿಣ ಕೊರಿಯಾದ ದೈತ್ಯ ಉಕ್ಕು ಸಂಸ್ಥೆ ಪೋಸ್ಕೊ ಭಾರತದಲ್ಲಿ ಭಾರೀ ಹೂಡಿಕೆಯನ್ನು ಮಾಡಲು ಯೋಜಿಸಿದೆ, ಇದು ಒಡಿಶಾದಲ್ಲಿ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಅನ್ನು ಸ್ಥಾಪಿಸುವ ಸಲುವಾಗಿ 12 ಬಿಲಿಯನ್ ಯುಎಸ್ ಡಾಲರ್ (ಅಂದಾಜು 90,000 ಕೋಟಿ ರೂ.) ಹೂಡಿಕೆ ಮಾಡಲಿದೆ. ಈ ಬಗ್ಗೆ ದಕ್ಷಿಣ ಕೊರಿಯಾದ ಭಾರತ ರಾಯಭಾರಿ ಶಿನ್ ಬೊಂಗ್ಕಿಲ್ ಸೋಮವಾರ ಮಾಹಿತಿ ನೀಡಿದ್ದಾರೆ.
ಇಂಡಸ್ಟ್ರಿಯಲ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ), ಇಂಡಸ್ಟ್ರಿಯಲ್ ಪ್ರೊಮೋಶನ್ ಆಂಡ್ ಇನ್ವೆಸ್ಟ್ ಕಾರ್ಪೊರೇಷನ್ ಆಫ್ ಒಡಿಶಾ ಲಿಮಿಟೆಡ್ (ಐಪಿಐಸಿಒಎಲ್) ಸಹಯೋಗದೊಂದಿಗೆ ಆಯೋಜಿಸಿದ ‘ಸೌತ್ ಕೊರಿಯಾ ಆಂಡ್ ಒಡಿಶಾ: ಪ್ರೊಮೋಟಿಂಗ್ ಬೈಲ್ಯಾಟರಲ್ ಬ್ಯುಸಿನೆಸ್ ಆಪಾರ್ಚುನಿಟಿಸ್’ ಎಂಬ ವರ್ಚುವಲ್ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ
ಕಳೆದ ಒಂದು ವರ್ಷದಲ್ಲಿ ಕೊರಿಯಾದ 66 ಹೊಸ ಕಂಪನಿಗಳು ಭಾರತವನ್ನು ಪ್ರವೇಶಿಸಿವೆ ಮತ್ತು 2020 ರಲ್ಲಿ 17 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಿದೆ ಎಂದು ಬೊಂಗ್ಕಿಲ್ ಹೇಳಿದ್ದಾರೆ.
ಕೊರಿಯಾ ವ್ಯಾಪಾರ-ಹೂಡಿಕೆ ಉತ್ತೇಜನ ಸಂಸ್ಥೆ ಯಂಗ್ ಸಿಯಾನ್ ಪಾರ್ಕ್ ನಿರ್ದೇಶಕ ಹೇಳುವ ಪ್ರಕಾರ, ಕೊರಿಯಾದ ಕಂಪನಿಗಳು ನವೀಕರಿಸಬಹುದಾದ ಇಂಧನ, ನೀರು ಸಂಸ್ಕರಣೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಹಳ ಉತ್ಸುಕವಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.