ನವದೆಹಲಿ: ಮುಂದಿನ ತಲೆಮಾರಿನ (5 ಜಿ) ತಂತ್ರಜ್ಞಾನ, ಕೃತಕ ತಂತ್ರಜ್ಞಾನ (ಎಐ) ಮತ್ತು ಮಾನವರಹಿತ ವಾಹನಗಳನ್ನು ತನ್ನ ಸಶಸ್ತ್ರ ಪಡೆಗಳ ಮೂರು ಅಂಗಗಳಲ್ಲಿ ಸ್ಥಾಪಿಸಲು ಭಾರತವು ದೃಢ ಹೆಜ್ಜೆ ಮುಂದಿಟ್ಟಿದೆ, ಈ ಮೂಲಕ ಯುಎಸ್ ಮತ್ತು ಚೀನಾದಂತಹ ಪ್ರಮುಖ ಜಾಗತಿಕ ಶಕ್ತಿಗಳಿಗೆ ಸಮಾನವಾಗಿ ತನ್ನ ತಂತ್ರಜ್ಞಾನದ ಸಾಮರ್ಥ್ಯವನ್ನು ವೃದ್ಧಿಸಲಿದೆ.
5 ಜಿ ತಂತ್ರಜ್ಞಾನ ಮತ್ತು ಎಐ ಅಳವಡಿಸಿಕೊಳ್ಳುವುದರಿಂದ ಭಾರತೀಯ ರಕ್ಷಣಾ ಸಾಮರ್ಥ್ಯಗಳು ಸಮಗ್ರವಾಗಿ ಸುಧಾರಿಸಲಿವೆ, ಶತ್ರುಗಳ ಚಲನವಲನವನ್ನು ನಿಖರವಾಗಿ ಪತ್ತೆ ಮಾಡಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೆಚ್ಚಾಗಲಿದೆ.
“ಭವಿಷ್ಯದಲ್ಲಿ ಮಾನವರಹಿತ ವಾಹನಗಳು ಮತ್ತು ಎಐಗಳ ಬಳಕೆಯನ್ನು ಪರಿಗಣಿಸಿ ಸಶಸ್ತ್ರ ಪಡೆಗಳು 5 ಜಿ ನೆಟ್ವರ್ಕ್ಗೆ ಬದಲಾಗುತ್ತಿವೆ. 5 ಜಿ ಸಂಪರ್ಕವನ್ನು ಮುಂದೆ ತೆಗೆದುಕೊಂಡು ಹೋಗಲು ಸಚಿವಾಲಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ”ಎಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್ ಅವರು ತಿಳಿಸಿದ್ದಾರೆ.
ಯುಎಸ್ ರಕ್ಷಣಾ ಇಲಾಖೆ ಕಳೆದ ವರ್ಷ ಅಕ್ಟೋಬರ್ನಲ್ಲಿ 5 ಜಿ ಮೇಲಿನ ಪ್ರಯೋಗಗಳಿಗಾಗಿ ಮತ್ತು ಕೆಲವು ಮಿಲಿಟರಿ ತಾಣಗಳಲ್ಲಿ ಪರೀಕ್ಷಾ ಉದ್ದೇಶಗಳಿಗಾಗಿ $ 600 ಮಿಲಿಯನ್ ಖರ್ಚು ಮಾಡುತ್ತೇವೆ ಎಂದು ಬಹಿರಂಗಪಡಿಸಿತ್ತು. ಚೀನಾ ಕೂಡ ಇದಕ್ಕಾಗಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಿದೆ.
ಭಾರತ ಕೂಡ ಇದೀಗ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.