ನವದೆಹಲಿ: ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ರೈಲ್ವೆ 4,002 ರೈಲು ಬೋಗಿಗಳನ್ನು ಕೋವಿಡ್-19 ಕೇರ್-ಕಮ್-ಐಸೊಲೇಷನ್ ಸೌಲಭ್ಯವಾಗಿ ಪರಿವರ್ತಿಸಿದೆ. ಕೋರಿಕೆಯ ಮೇರೆಗೆ ಈ ಬೋಗಿಗಳನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ.
ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಮಹಾರಾಷ್ಟ್ರದ ನಂದೂರ್ಬಾರ್ನ ಕೋವಿಡ್-19 ಆರೈಕೆ ಕೇಂದ್ರವಾಗಿ ಪರಿವರ್ತಿಸಲಾದ ರೈಲ್ವೆ ಬೋಗಿಗಳ ಕೆಲವು ಚಿತ್ರಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರೈಲ್ವೆ ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ 94 ಬೋಗಿಗಳನ್ನು ನಿಯೋಜಿಸಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾದಾಗ ರಾಜ್ಯ ಸರ್ಕಾರಗಳು ಇವುಗಳನ್ನು ಬಳಸಬಹುದಾಗಿದೆ.
ಈ ನಡುವೆ, ಉತ್ತರ ರೈಲ್ವೆ ದೆಹಲಿಯ ಶಕುರ್ ಬಸ್ತಿ ರೈಲು ನಿಲ್ದಾಣದಲ್ಲಿ 50 ಪ್ರತ್ಯೇಕ ಬೋಗಿಗಳನ್ನು ನಿಯೋಜಿಸಲಾಗಿದೆ ಮತ್ತು ಅಂತಹ 25 ಸೌಲಭ್ಯಗಳನ್ನು ಆನಂದ್ ವಿಹಾರದಲ್ಲಿ ಇರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು 5,000 ಹಾಸಿಗೆಗಳವರೆಗೆ ವ್ಯವಸ್ಥೆ ಮಾಡುವಂತೆ ದೆಹಲಿ ಸರ್ಕಾರ ರೈಲ್ವೆಗೆ ಮನವಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.