News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್ ಜೊತೆ ನೀತಿ ಆಯೋಗ, ಅಟಲ್‌ ಇನ್ನೋವೇಶನ್ ಒಪ್ಪಂದ

ನವದೆಹಲಿ: ಅಟಲ್ ಇನ್ನೋವೇಶನ್ ಮಿಷನ್ ಮತ್ತು ನೀತಿ ಆಯೋಗವು ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ದೇಶಾದ್ಯಂತದ ಯುವ ಮನಸ್ಸುಗಳಲ್ಲಿ ಡಿಜಿಟಲ್ ಸಮೃದ್ಧವಾದ ಪರಿಸರ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಇವು ಜಂಟಿಯಾಗಿ ಕೆಲಸ ಮಾಡಲಿದೆ.

ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವಲ್ಲಿ ಅಟಲ್ ಥಿಂಕರಿಂಗ್ ಲ್ಯಾಬ್ಸ್ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿದೆ.

ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್ ಭಾರತದಲ್ಲಿ ಶಿಕ್ಷಣ ಮತ್ತು ಸಂಶೋಧನೆಯ ಭವಿಷ್ಯವನ್ನು 3D ತಂತ್ರಜ್ಞಾನಗಳೊಂದಿಗೆ ಪರಿವರ್ತಿಸಲು ಸಮರ್ಪಿತವಾಗಿದೆ. ಪ್ರಾಜೆಕ್ಟ್ ಆಧಾರಿತ, ಸ್ವ-ಗತಿಯ ಕಲಿಕೆಯ ವಿಷಯ, ಹ್ಯಾಕಥಾನ್‌ಗಳು ಮತ್ತು ಸವಾಲುಗಳು ಮತ್ತು ಅಂತರ-ದೇಶ ಅಕಾಡೆಮಿ ಸಹಯೋಗಗಳೊಂದಿಗೆ ಮೂರು ವಿಶಾಲ ಕ್ಷೇತ್ರಗಳಲ್ಲಿ ಅಟಲ್ ಥಿಂಕರಿಂಗ್ ಲ್ಯಾಬ್ಸ್ ಕಾರ್ಯಕ್ರಮಕ್ಕೆ  ಕೊಡುಗೆ ನೀಡುತ್ತದೆ.

ಈ ಒಪ್ಪಂದದ ಪ್ರಕಾರ, ಡಸಾಲ್ಟ್ ಸಿಸ್ಟಮ್ಸ್ ಫೊಂಡೇಶನ್ ಅಟಲ್ ಟಿಂಕರಿಂಗ್ ಲ್ಯಾಬ್‌ಗಳಿಗೆ ನವೀನ ಸವಾಲುಗಳನ್ನು, ಹ್ಯಾಕಥಾನ್‌ಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ಆಯೋಜಿಸುತ್ತದೆ, ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top