ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡುವುದು ಹಲವು ವಿಧಗಳಲ್ಲಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಿಮ್ಮ ಹಣಕ್ಕೆ ಉತ್ತಮ ರಿಟರ್ನ್ಸ್ ಪಡೆಯುತ್ತೀರಿ ಮತ್ತು ನಿಮ್ಮ ಹಣ ಸುರಕ್ಷಿತವೂ ಹೌದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿ.
ಈ ಮೊದಲು ಕೇವಲ ಪತ್ರ ವ್ಯವಹಾರಗಳಿಗೆ ಸೀಮಿತವಾಗಿದ್ದ ಅಂಚೆ ಕಚೇರಿ ಈಗ ಬ್ಯಾಂಕ್ನಂತೆ ಕಾರ್ಯನಿರ್ವಹಿಸಲ್ಪಡುತ್ತಿದೆ. ಹಲವು ರೀತಿಯ ಸೌಲಭ್ಯಗಳು ಮತ್ತು ಎಲ್ಲಾ ಸೌಲಭ್ಯಗಳು ಗ್ರಾಮೀಣ ಜನ ಕೇಂದ್ರಿತವಾಗಿರುವುದರಿಂದ ಯಶಸ್ವಿಯಾಗಿದೆ.
ಅಂಚೇ ಕಚೇರಿ ಸಂಬಂಧಿತ ಎಲ್ಲಾ ವ್ಯವಹಾರಗಳನ್ನು ಮನೆಯಲ್ಲೇ ಕುಳಿತು ನೋಡಬಹುದಾಗಿದೆ. ಖಾತೆಗೆ ಸಂಬಂಧಿತ ಎಲ್ಲಾ ವಿಚಾರಗಳನ್ನು ತಿಳಿಯಬಹುದು, ಡೌನ್ಲೋಡ್ ಮಾಡುಬಹುದು, ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಅಂಚೆ ಕಚೇರಿಯಿಂದ ಆನ್ಲೈನ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ.
ಇಂಟರ್ನೆಟ್ ಬಳಸುವ ಅಂಚೆ ಖಾತೆದಾರರು ಇಂಡಿಯಾ ಪೋಸ್ಟ್ ಇಂಟರ್ನೆಟ್ ಬ್ಯಾಂಕಿಂಗ್ಗೆ ಲಾಗಿನ್ ಆಗಬೇಕು. ಇಲ್ಲಿ ನೀವು ನ್ಯಾವಿಗೇಟ್ ಅಕೌಂಟ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆ ನಂತರ, ಬ್ಯಾಲೆನ್ಸ್ ಮತ್ತು ವಹಿವಾಟು ಮಾಹಿತಿಯ ಮೇಲೆ ಒತ್ತಿದಾಗ ಉಳಿತಾಯ ಖಾತೆಯ ಮೇಲೆ ಕ್ಲಿಕ್ ಮಾಡಬೇಕು. ನನ್ನ ವ್ಯವಹಾರಗಳು ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲೆ, ಇಲ್ಲಿ ಬ್ಯಾಂಕ್ ಸ್ಟೇಟ್ಮೆಂಟ್ ಡೌನ್ಲೋಡ್ ಮಾಡಬಹುದು.
ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಇದಕ್ಕೆ ಲಾಗಿನ್ ಆಗಿ ಮತ್ತು ಖಾತೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ನಡೆಸಿದ ವಹಿವಾಟಿನ ಹಿಸ್ಟರಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಸ್ಟೇಟ್ಮೆಂಟ್ ಅನ್ನುಇಲ್ಲಿ ಡೌನ್ಲೋಡ್ ಮಾಡಬಹುದು.
ಎಂದೋ ಮೂಲೆ ಗುಂಪಾಗಬೇಕಿದ್ದ ಅಂಚೆ ಕಚೇರಿಗೆ ಒಂದು ಹೊಸ ರೂಪ ಕೊಟ್ಟು ಅದನ್ನು ಪತ್ರ ವ್ಯವಹಾರಗಳಿಗೆ ಸೀಮಿತವಾಗಿಸದೆ ಬ್ಯಾಂಕ್ ವ್ಯವಹಾರಗಳಿಗೆ ತೆರದುಕೊಳ್ಳುವಂತೆ ಮಾಡಿದ ಕೀರ್ತಿ ಕೇಂದ್ರ ಸರ್ಕಾರದ್ದು ಎಂದರೆ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.