ಹುಬ್ಬಳ್ಳಿ: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವಂತೆ ಮಾಡಿಕೊಂಡಿದ್ದ ಮನವಿಯನ್ನು ರೈಲ್ವೆ ಇಲಾಖೆ ಪುರಸ್ಕರಿಸಿದೆ.
ಮನವಿಗೆ ಸ್ಪಂದನೆ ನೀಡಿರುವ ನೈಋತ್ಯ ರೈಲ್ವೆ ವಲಯ ಶುಕ್ರವಾರದಿಂದ ಆರಂಭವಾಗುವಂತೆ 9 ವಿಶೇಷ ರೈಲುಗಳ ಸೇವೆ ನೀಡುವುದಾಗಿ ತಿಳಿಸಿದೆ. ಯಶವಂತಪುರ – ಬೆಳಗಾವಿ ನಡುವಿನ ರೈಲು ಎ. 9 ರಂದು ರಾತ್ರಿ 10.15 ಕ್ಕೆ ಯಶವಂತಪುರದಿಂದ ಸೇವೆಯನ್ನು ಆರಂಭ ಮಾಡಲಿದ್ದು, ಮರುದಿನ ಮುಂಜಾನೆ 9.10 ರ ಸುಮಾರಿಗೆ ಬೆಳಗಾವಿಗೆ ತಲುಪಲಿದೆ. ಅದೇ ದಿನದಂದು ರಾತ್ರಿ 10 ಗಂಟೆಗೆ ಈ ರೈಲು ಬೆಳಗಾವಿಯಿಂದ ಮರಳಿ ಯಶವಂತಪುರದತ್ತ ಸಂಚಾರ ಆರಂಭ ಮಾಡಲಿದೆ.
ಎ. 9 ರಂದು ಸಂಜೆ 6.20 ರ ಸುಮಾರಿಗೆ ಯಶವಂತಪುರದಿಂದ ವಿಜಯಪುರಕ್ಕೆ ರೈಲು ಸೇವೆಯನ್ನು ಒದಗಿಸಲಾಗಿದೆ. ಎ. 9 ರಂದು ಬೆಂಗಳೂರು – ಮೈಸೂರು ನಗರಗಳ ನಡುವೆ ರೈಲು ಸಂಚಾರ ನಡೆಸಲಿದ್ದು, ಬೆಳಗ್ಗೆ 10.30 ಕ್ಕೆ ಬೆಂಗಳೂರಿನಿಂದ, ಮಧ್ಯಾಹ್ನ 2.30 ರ ವೇಳೆಗೆ ಮೈಸೂರಿನಿಂದ ಸೇವೆ ನೀಡಲಿದೆ. ಎ. 9 ಮತ್ತು 10 ರಂದು ಮೈಸೂರು, ಯಶವಂತಪುರ ರೈಲು, ಮೈಸೂರಿನಿಂದ ಬೆಳಗ್ಗೆ 8.25 ಕ್ಕೆ, ಯಶವಂತಪುರದಿಂದ ಮಧ್ಯಾಹ್ನ 1.15 ಕ್ಕೆ ಹೊರಡಲಿದೆ. ಮೈಸೂರು – ಬೀದರ್ ರೈಲು ಎ. 9 ರಂದು ರಾತ್ರಿ 8 ಗಂಟೆಗೆ ಮೈಸೂರಿನಿಂದ, ಮರುದಿನ ಮಧ್ಯಾಹ್ನ 2 ಗಂಟೆಗೆ ಬೀದರ್ ನಿಂದ ಪ್ರಯಾಣ ಆರಂಭ ಮಾಡಲಿದೆ. ಯಶವಂತಪುರ – ಬೀದರ್ ನಡುವಣ ರೈಲು ಎ. 10 ರಂದು ಕಲ್ಬುರ್ಗಿ ಮಾರ್ಗವಾಗಿ ಸಂಚರಿಸಲಿದ್ದು, ರಾತ್ರಿ 10.15 ಕ್ಕೆ ಯಶವಂತಪುರದಿಂದ, ಮರುದಿನ ಮಧ್ಯಾಹ್ನ 2 ಗಂಟೆಗೆ ಬೀದರ್ ನಿಂದ ಪ್ರಯಾಣ ಆರಂಭ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.