ನವದೆಹಲಿ: ಆಫ್ರಿಕಾ ಸೇರಿದಂತೆ ಭಯೋತ್ಪಾದನಾ ನಿಗ್ರಹ ನಿಧಿಗಾಗಿ ಯುಎನ್ ಟ್ರಸ್ಟ್ ಫಂಡ್ಗೆ ಭಾರತವು ಈವರೆಗೆ 1 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ ಎಂದು ವಿಶ್ವಸಂಸ್ಥೆಯಲ್ಲಿನ ದೇಶದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
“ಭಯೋತ್ಪಾದನೆ ನಿಗ್ರಹಕ್ಕಾಗಿ ಯುಎನ್ ಟ್ರಸ್ಟ್ ಫಂಡ್ಗೆ 500,000 ಯುಎಸ್ ಡಾಲರ್ ಕೊಡುಗೆ ನೀಡಲು ಭಾರತ ಹೆಮ್ಮೆಪಡುತ್ತದೆ. ಈ ನಿಧಿಗೆ ಭಾರತದ ಒಟ್ಟು ಕೊಡುಗೆ ಯುಎಸ್ಡಿ 1,050,000 . ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಕೌಂಟರ್-ಟೆರರಿಸಂನೊಂದಿಗೆ, ಭಯೋತ್ಪಾದನೆಯನ್ನು ಎದುರಿಸುವ ನಮ್ಮ ಸಾಮಾನ್ಯ ಉದ್ದೇಶವನ್ನು ಹೆಚ್ಚಿಸುವ ಯೋಜನೆಗಳೊಂದಿಗೆ ನಮ್ಮ ಕೆಲಸವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ.”ಎಂದು ನ್ಯೂಯಾರ್ಕ್ನಲ್ಲಿರುವ ಇಂಡಿಯನ್ ಮಿಷನ್ ಬುಧವಾರ ಟ್ವೀಟ್ನಲ್ಲಿ ಹೇಳಿದೆ.
ತಿರುಮೂರ್ತಿ ಟ್ವೀಟ್ನಲ್ಲಿ “ಭಾರತವು ಸದಸ್ಯ ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ತಡೆಗಟ್ಟುವ ಮತ್ತು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ದೃಢವಾದ ಮತ್ತು ಕೇಂದ್ರೀಕೃತ ಬದ್ಧತೆಯನ್ನು ಮುಂದುವರೆಸಿದೆ. ಆಫ್ರಿಕಾ ಸೇರಿದಂತೆ ಭಾರತ ಈವರೆಗೆ ನಿಧಿಗೆ US $ 1 ಮಿಲಿಯನ್ಗಿಂತ ಹೆಚ್ಚಿನ ಕೊಡುಗೆ ನೀಡಿದೆ” ಎಂದಿದ್ದಾರೆ.
ಭಯೋತ್ಪಾದನೆ ಮಾನವ ಹಕ್ಕುಗಳ ವಿರುದ್ಧದ ದಾಳಿ ಎಂದು ಒತ್ತಿಹೇಳಿರುವ ಭಾರತ, ಜಾಗತಿಕ ಭಯೋತ್ಪಾದನಾ ನಿಗ್ರಹದ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಮತ್ತು ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆಯ ನಡುವೆ ಯಾವುದೇ ವಿರೋಧಾಭಾಸವನ್ನು ಕಾಣುವುದಿಲ್ಲ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.