ನವದೆಹಲಿ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳ ಮೇಲೆ ಹೊಂಚು ಹಾಕಿ ದಾಳಿ ನಡೆಸಿ 22 ಯೋಧರ ಸಾವಿಗೆ ಕಾರಣರಾದ ನಕ್ಸಲರು ಈಗ ತಮ್ಮ ಬೇಡಿಕೆ ಈಡೇರಿಸಲು ಮತ್ತೊಂದು ಬೇಡಿಕೆಯನ್ನು ಇರಿಸಿದ್ದಾರೆ. ಅಪಹರಿಸಲ್ಪಟ್ಟ ಯೋಧನನ್ನು ಬಿಡುಗಡೆಗೊಳಿಸಲು ಮಧ್ಯಸ್ಥಿಕೆ ಬೇಕು ಎಂಬ ಬೇಡಿಕೆಯೊಂದನ್ನು ನಕ್ಸಲರು ಇಟ್ಟಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಿಪಿಐನ ದಂಡಕಾರಣ್ಯ ವಿಶೇಷ ವಲಯ ಸಮಿತಿ ಬರೆದ ಈ ಪತ್ರದಲ್ಲಿ ಅಪಹೃತ ಕಮಾಂಡೊ ಅಧಿಕಾರಿ ನಮ್ಮ ವಶದಲ್ಲಿದ್ದಾರೆ. ಇವರನ್ನು ಬಿಡಿಸಿಕೊಳ್ಳುವ ಮತ್ತು ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಮಧ್ಯಸ್ಥಿಕೆ ವಹಿಸಲು ಮಧ್ಯಸ್ಥರನ್ನು ಕಳುಹಿಸಿ ಎಂದು ಮಾವೋವಾದಿ ನಕ್ಸಲರು ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಭದ್ರತಾ ಪಡೆ ಅಧಿಕಾರಿ ಹಾಗೂ ಸಿಆರ್ಪಿಎಫ್ನ ಕಮಾಂಡರ್ ತಿಳಿಸಿದ್ದಾರೆ.
ಇನ್ನೊಂದೆಡೆ ತಮ್ಮ ವಶದಲ್ಲಿರುವ ಯೋಧರ ಫೋಟೋವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.