ಕೋಲ್ಕತಾ: ಕಳೆದ ರಾತ್ರಿ ನಡೆದ ಘಟನೆಯೊಂದರಲ್ಲಿ, ಪಶ್ಚಿಮಬಂಗಾಳದ ಉಲುಬೇರಿಯಾ ಉತ್ತರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ನಿವಾಸದಲ್ಲಿ ನಾಲ್ಕು ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಮತ್ತು ನಾಲ್ಕು ಮತದಾರ-ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಪತ್ತೆಯಾಗಿದೆ.
ತುಳಸಿಬೇರಿಯಾದಲ್ಲಿರುವ ಟಿಎಂಸಿ ನಾಯಕ ಗೌತಮ್ ಘೋಷ್ ಅವರ ಮನೆಯಿಂದ ಇವಿಎಂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಹೇಳಿದ್ದಾರೆ. ಚುನಾವಣಾ ಕರ್ತವ್ಯ ನಿರತ ಕಾರಿನಲ್ಲಿ ಯಂತ್ರಗಳನ್ನು ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಟಿಎಂಸಿ ನಾಯಕನ ಮನೆಯ ಹೊರಗೆ ‘ಸೆಕ್ಟರ್ 17’ ಚುನಾವಣಾ ಕರ್ತವ್ಯ ನಿರತ ಕಾರನ್ನು ನಿಲ್ಲಿಸಲಾಗಿತ್ತು.
ಸೆಕ್ಟರ್ ಆಫೀಸರ್ ಅಲ್ಲಿನ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ, ಆದರೂ, ಇದು ತಡರಾತ್ರಿಯಾಗಿದ್ದರಿಂದ ಕೇಂದ್ರೀಯ ಪಡೆಗಳು ಮಲಗಿದ್ದವು ಮತ್ತು ಬೂತ್ಗಳು ತೆರೆದಿರಲಿಲ್ಲ, ಆದ್ದರಿಂದ ನಿದ್ರೆ ಮಾಡಲು ಸಂಬಂಧಿಕರ ಮನೆಗೆ ಹೋದೆವು , ಅದು ಟಿಎಂಸಿ ನಾಯಕನ ಮನೆ ಎಂದು ಸಿಕ್ಕಿ ಬಿದ್ದ ಅಫೀಸರ್ ಕಥೆ ಕಟ್ಟಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು. ಇವಿಎಂ ಮತ್ತು ವಿವಿಪ್ಯಾಟ್ಗಳನ್ನು ಪೊಲೀಸರು ವಶಪಡಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
ಸೆಕ್ಟರ್ ಅಧಿಕಾರಿಯನ್ನು ಸಹ ಅಮಾನತುಗೊಳಿಸಲಾಗಿದೆ ಮತ್ತು ವಶಪಡಿಸಿಕೊಂಡ ನಾಲ್ಕು ಇವಿಎಂಗಳನ್ನು ಬಳಕೆಗೆ ನಿರ್ಬಂಧಿಸಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಈ ನಷ್ಟಕ್ಕೆ ಕಾರಣವಾದ ಮತದಾನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಆದೇಶಗಳನ್ನು ಹೊರಡಿಸಲಾಗುತ್ತದೆ. ಸೆಕ್ಟರ್ ಅಧಿಕಾರಿಗೆ ನೀಡಲಾದ ಸೆಕ್ಟರ್ ಪೊಲೀಸರನ್ನು ಸಹ ಅಮಾನತುಗೊಳಿಸುವಂತೆ ನಿರ್ದೇಶಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.