ಬೆಂಗಳೂರು: ರಾಜ್ಯದಲ್ಲಿ ಚುನಾವಣೆ, ಹಬ್ಬ ಹರಿದಿನಗಳು, ಪ್ರತಿಭಟನೆ ಸೇರಿದಂತೆ ಎಲ್ಲಾ ಸಮಯದಲ್ಲಿಯೂ ಸಾರ್ವಜನಿಕರಿಗೆ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆಯನ್ನು 100 ರೂ. ಗಳಿಂದ 200 ರೂ. ಗಳಿಗೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅಗತ್ಯವಸ್ತುಗಳು, ಆಹಾರ ವಸ್ತುಗಳ ಮೇಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳ ಆಹಾರ ಭತ್ಯೆಯನ್ನು ಏರಿಸಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಈ ವರೆಗೆ ರಾಜ್ಯದ ಪೊಲೀಸರಿಗೆ ದಿನಕ್ಕೆ 100 ರೂ. ಗಳಂತೆ ಆಹಾರ ಭತ್ಯೆ ನೀಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ 200 ರೂ. ಗಳನ್ನು ಆಹಾರ ಭತ್ಯೆಯಾಗಿ ನೀಡಲಾಗುತ್ತದೆ. 100 ರೂ ಭತ್ಯೆಯಲ್ಲಿ ಪೊಲೀಸರಿಗೆ ದಿನದ ಆಹಾರದ ಖರ್ಚನ್ನು ಸರಿದೂಗಿಸುವುದು ಕಷ್ಟವಾಗುತ್ತಿದ್ದು ಈ ಹಿನ್ನಲೆಯಲ್ಲಿ 200 ರೂ. ಗಳನ್ನು ನೀಡಲು ನೀಡಲು ಮುಂದಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಇಲಾಖೆಯ ಮನವಿಯನ್ನಾಧರಿಸಿ ಈ ಭತ್ಯೆಯನ್ನು ಏರಿಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.