ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಗುರುವಾರ ಬಲವಂತದ ಧಾರ್ಮಿಕ ಮತಾಂತರವನ್ನು ತಡೆಗಟ್ಟುವ ಸಲುವಾಗಿ ಮಹತ್ವದ ಮಸೂದೆಯನ್ನು ಅಂಗೀಕರಿಸಿದೆ. ‘ಧರ್ಮ ಸ್ವಾತಂತ್ರ್ಯ’ ಕಾಯ್ದೆ 2003 ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ.
ಪ್ರೀತಿಯ ಹೆಸರಿನಲ್ಲಿ, ಮದುವೆಯ ಹೆಸರಿನಲ್ಲಿ ಬಲವಂತವಾಗಿ ಮಾಡಲಾಗುವ ಧಾರ್ಮಿಕ ಮತಾಂತರಗಳನ್ನು ತಡೆಗಟ್ಟುವ ಮಹತ್ವದ ಉದ್ದೇಶವನ್ನು ಈ ಮಸೂದೆ ಒಳಗೊಂಡಿದೆ.
ಆಡಳಿತಾರೂಢ ಬಿಜೆಪಿಯಿಂದ ಮಂಡಿಸಲ್ಪಟ್ಟ ಈ ತಿದ್ದುಪಡಿಯು ಉತ್ತಮ ಜೀವನಶೈಲಿ, ದೇವರ ಆಶೀರ್ವಾದ ಮತ್ತು ವಿವಾಹದ ನೆಪದಲ್ಲಿ ಆಮಿಷಕ್ಕೆ ಒಳಪಡಿಸಿ ಮಾಡುವ ಧಾರ್ಮಿಕ ಮತಾಂತರವನ್ನು ನಿಷೇಧಿಸಲಿದೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಪ್ರಯತ್ನಿಸುತ್ತದೆ.
ಈ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಸಚಿವ ಪ್ರದೀಪ್ ಸಿನಃ ಜಡೇಜಾ ಮಂಡಿಸಿದರು.
ಧಾರ್ಮಿಕ ಮತಾಂತರದ ಉದ್ದೇಶದಿಂದ ಮಹಿಳೆಯರನ್ನು ಮದುವೆಯ ಆಮಿಷಕ್ಕೆ ಒಳಪಡಿಸುವ ಪ್ರವೃತ್ತಿ ಇದೆ ಎಂದು ರಾಜ್ಯ ಸರ್ಕಾರ ಭಾವಿಸುತ್ತದೆ. ಇದುವೇ ಈ ತಿದ್ದುಪಡಿಯನ್ನು ತರಲು ಕಾರಣ ಎಂದು ಬಿಜೆಪಿ ಸರ್ಕಾರ ಉಲ್ಲೇಖಿಸಿದೆ.
ಮಸೂದೆಯ ನಿಬಂಧನೆಗಳ ಪ್ರಕಾರ, ತಪ್ಪಿತಸ್ಥರು ಮೂರು ವರ್ಷಕ್ಕಿಂತ ಕಡಿಮೆಯಲ್ಲದ ಮತ್ತು ಐದು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. 2 ಲಕ್ಷ ರೂ.ಗಳ ದಂಡವನ್ನು ಸಹ ಪಾವತಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.