ಬೆಂಗಳೂರು: ನಗರದ ವಿಮಾನ ತರಬೇತಿ ವಲಯಕ್ಕೆ ನೂತನ ಹನ್ಸಾ-ಎನ್ ಜಿ ಹೆಸರಿನ ತರಬೇತಿ ವಿಮಾನ ಸೇರ್ಪಡೆಯಾಗಿದೆ.
ಸಿಎಸ್ಐಆರ್ನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸಂಸ್ಥೆ ಈ ವಿಮಾನವನ್ನು ಬೇಲೂರು ಕ್ಯಾಂಪಸ್ನಲ್ಲಿರುವ ವಿಮಾನ ತರಬೇತಿ ಕೇಂದ್ರಕ್ಕೆ ತಂದಿಳಿಸಿದೆ. ಈ ತರಬೇತಿ ವಿಮಾನದ ಎಲ್ಲಾ ಸಂಯೋಜಿತ ಭಾಗಗಳು ಜೆಎಆರ್-ವಿಎಲ್ಎ ವಿಭಾಗದಡಿಯಲ್ಲಿ ಡಿಜಿಸಿಎ 2000 ರಲ್ಲಿ ಪ್ರಮಾಣೀಕರಣ ಮಾಡಿದ್ದಾಗಿವೆ. ಈ ಸುಧಾರಿತ ಸ್ವದೇಶೀ ತರಬೇತಿ ವಿಮಾನಗಳ ಅಗತ್ಯತೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2018 ನೇ ವರ್ಷದಲ್ಲಿಯೇ ಅನುಮೋದನೆಯನ್ನೂ ನೀಡಿತ್ತು.
ಈ ತರಬೇತಿ ವಿಮಾನವು ಸ್ಮಾರ್ಟ್ ಮಲ್ಟಿ ಫಂಕ್ಷನಲ್ ಡಿಸ್ಪ್ಲೇ, ಗ್ಲಾಸ್ ಕಾಕ್ಪಿಟ್, ಬಬಲ್ ಮೇಲ್ಚಾವಣಿ ವಿನ್ಯಾಸದ ಜೊತೆಗೆ ಐಎಫ್ಆರ್ – ಕಂಪ್ಲೈಂಟ್ ಏವಿಯಾನಿಕ್ಸ್ ಅನ್ನು ಒಳಗೊಂಡಿದೆ. ಈ ವಿಮಾನದ ಶ್ರೇಣಿ ಮತ್ತು ಸಾಮರ್ಥ್ಯವನ್ನು ಡಿಜಿಟಲ್ ನಿಯಂತ್ರಿತ ರೋಟಾಕ್ಸ್ 912 ಐಎಸ್ಸಿ ಎಂಜಿನ್ನ ಆಯ್ಕೆಯು ಹೆಚ್ಚಿಸಿದೆ. ಈ ವಿಮಾನವನ್ನು ತರಬೇತಿಗೆ ಬಳಕೆ ಮಾಡಿಕೊಳ್ಳುವ ಸಲುವಾಗಿ ಡಿಜಿಸಿಎಯಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2020 ರಲ್ಲಿಯೇ ೀ ವಿಮಾನ ತಯಾರಿಕೆ ಆರಂಭ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.