ಕೈರೋ: ಕಳೆದ 6 ದಿನಗಳಿಂದ ಜಾಗತಿಕವಾಗಿ ಸುದ್ದಿಯಲ್ಲಿರುವ ಎವರ್ಗ್ರಿನ್ ಕಂಪನಿಯ ಎವರ್ ಗಿವೆನ್ ಬೃಹತ್ ಹಡಗು ಕೊನೆಗೂ ಸುಯೆಜ್ ಕಾಲುವೆಯಿಂದ ಸಂಚಾರ ಪ್ರಾರಂಭಿಸಿದೆ.
ನಾಲ್ಕು ಫುಟ್ಬಾಲ್ ಮೈದಾನದಷ್ಟು ಉದ್ದವಿರುವ ʼಎಂವಿ ಎವರ್ ಗ್ರಿವೆನ್ʼ ಬೃಹತ್ ಹಡಗು ಕಳೆದ ಮಂಗಳವಾರದಿಂದ ಸುಯೆಜ್ ಕಾಲುವೆಯಲ್ಲಿ ಅಡ್ಡವಾಗಿ ಸಿಲುಕಿ ಹಾಕಿಕೊಂಡು ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಾಣೆಯಲ್ಲಿ ಅಡಚಣೆ ಉಂಟಾಗಿತ್ತು. ಈ ಹಡಗಿನ ಹಿಂದೆ ಸರದಿಯಂತೆ ಒಟ್ಟು 300 ಹಡಗುಗಳು ಮುಂದೆ ಸಾಗಲು ಆಗದೆ ಸುಯೆಜ್ ಕಾಲುವೆಯ ದಡದಲ್ಲೇ ಉಳಿದುಕೊಂಡಿತ್ತು.
ಸಿಲುಕಿ ಹಾಕಿಕೊಂಡಿರುವ ಹಡಗು ಈಗ ಮತ್ತೆ ತನ್ನ ಸಂಚಾರ ಪ್ರಾರಂಭಿಸಿದೆ ಎಂದು ವೆಸೆಲ್ ಫೈಂಡರ್ ಮತ್ತು ಮೈಶಿಪ್ ಟ್ರ್ಯಾಕಿಂಗ್ ಸೈಟ್ಗಳು ಈ ಮಾಹಿತಿಯನ್ನು ಹೊರಹಾಕಿದೆ. ಹತ್ತು ತಗ್ ಬೋಟ್ಗಳ ಸಹಾಯದಿಂದ ಕಂಟೇನರ್ ಹಡಗನ್ನು ಮತ್ತೆ ಸಂಚರಿಸುವಂತೆ ಎಳೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಈ ಬಗ್ಗೆ ಕಾಲುವೆ ಪ್ರಾಧಿಕಾರವು ಮುಂಜಾನೆ 5 ಕ್ಕೆ ಪ್ರಕಟಿಸಿತ್ತು ಎನ್ನಲಾಗಿದೆ.
ಹಡಗಿನ ಸುತ್ತಲೂ 59 ಅಡಿಗಳಷ್ಟೂ ಆಳದವರೆಗೆ ಸುಮಾರು 27,000 ಘನ ಮೀಟರ್ಗಳಷ್ಟು ಮರಳನ್ನು ಸಿಬ್ಬಂದಿ ತೆಗೆದಿದ್ದಾರೆ ಎಂದು ಇಲ್ಲಿನ ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.