ನವದೆಹಲಿ: ಭಾರತದಲ್ಲಿ ತೀವ್ರವಾಗಿ ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಸುದ್ದಿಯಾಗಿದ್ದ ಕೊರೋನಾ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡುವುದನ್ನು ಭಾರತ ನಿಷೇಧಿಸಿದೆ ಎಂಬ ವಿಚಾರಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವ್ಯಾಕ್ಸಿನ್ ರಫ್ತಿಗೆ ಯಾವುದೇ ನಿಷೇಧ ಹೇರಿಲ್ಲ ಎಂದು ತಿಳಿಸಿದೆ. ನಿರಂತರವಾಗಿ ವಿದೇಶಗಳಿಗೆ ವ್ಯಾಕ್ಸಿನ್ ತಲುಪಿಸಲಾಗುತ್ತಿದೆ ಎಂಬುದಾಗಿಯೂ ಮೂಲಗಳು ತಿಳಿಸಿವೆ.
ಜಗತ್ತಿನ ಹಲವು ದೇಶಗಳಿಗೆ ಲಸಿಕೆಗಳನ್ನು ಪೂರೈಸುತ್ತಿರುವ ಭಾರತದಲ್ಲಿಯೂ ಪ್ರಸ್ತುತ ಕೊರೋನಾ ಎರಡನೇ ಅಲೆಯ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ವಿದೇಶಗಳಿಗೆ ಅವುಗಳ ಅಗತ್ಯತೆಯನ್ನು ಪರಿಗಣಿಸಿ ಹಂತ ಹಂತವಾಗಿ ಲಸಿಕೆಗಳನ್ನು ಒದಗಿಸಲಾಗುತ್ತಿದೆ. ಲಸಿಕೆ ನೀಡುವಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೆ ನಿರಂತರತೆಯನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ ದೇಶದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನೇಶನ್ ಕಾರ್ಯಕ್ರಮಗಳು ನಡೆಯುತ್ತಿರುವುದಾಗಿಯೂ ಹೇಳಿವೆ.
ಭಾರತ ಉತ್ಪಾದಿಸುತ್ತಿರುವ ಒಟ್ಟು ಮತ್ತು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪೂರೈಸುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣಗಳಷ್ಟು ಲಸಿಕೆಗಳನ್ನು ಜಗತ್ತಿನ ಯಾವ ದೇಶಗಳು ಕೂಡ ಹೊಂದಿಲ್ಲ. ಕೋವಾಕ್ಸ್ ಸೇರಿದಂತೆ ಇತರ ಲಸಿಕೆಗಳನ್ನು 75 ಕ್ಕೂ ಹೆಚ್ಚು ದೇಶಗಳಿಗೆ ಈವರೆಗೆ 60 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ. ದೇಶದ ಪ್ರಸ್ತುತ ಉತ್ಪಾದನಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಅವಶ್ಯಕತೆಗಳನ್ನು ಗಮನಿಸಿದರೆ, ಕಾಲಕಾಲಕ್ಕೆ ಪೂರೈಕೆಯಾದ ಲಸಿಕೆಗಳ ಪಟ್ಟಿಯ ಮಾಪನಾಂಕ ನಿರ್ಣಯಿಸುವ ಅವಶ್ಯಕತೆಯಿದೆ ಎಂದು ಮೂಲಗಳು ತಿಳಿಸಿವೆ. ‘ಲಸಿಕೆ ಮೈತ್ರಿ’ ಯಡಿಯಲ್ಲಿ ಭಾರತ ತನ್ನ ಲಸಿಕೆ ಉತ್ಪಾದನೆ ಮತ್ತು ವಿಸ್ತರಣಾ ಸಾಮರ್ಥ್ಯವನ್ನು ಮಾನವಕುಲದ ಒಳಿತಿಗಾಗಿ ಬಳಸುತ್ತಿವೆ. ಆ ಮೂಲಕ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.