ನವದೆಹಲಿ: ಬುಧವಾರ ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನಾಥ್ ಅವರು ತಮ್ಮ ದೇಶಕ್ಕೆ ಕೋವಿಡ್-19 ಲಸಿಕೆಗಳನ್ನು ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಾರಿಷಸ್ನ ಭಾರತೀಯ ರಾಯಭಾರ ಕಚೇರಿಯು ಈ ಬಗೆಗಿನ ವಿಡಿಯೋ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಮಾರಿಷಸ್ ಪ್ರಧಾನಿ ಭಾರತವು ಉದಾರವಾಗಿ ನೀಡಿದ ಕೊಡುಗೆಗೆ ಧನ್ಯವಾದ ಅರ್ಪಿಸಿದ್ದಾರೆ.
“ಅಸ್ಟ್ರಾಜೆನೆಕಾ ಲಸಿಕೆಯ 100,000 ಡೋಸ್ಗಳನ್ನು ಉದಾರವಾಗಿ ದಾನ ಮಾಡಿದ್ದಕ್ಕಾಗಿ ಮತ್ತು ಮಾರಿಷಸ್ಗೆ ಇನ್ನೂ 100,000 ಡೋಸ್ ಅಸ್ಟ್ರಾಜೆನೆಕಾ ಲಸಿಕೆ ಮತ್ತು 200,000 ಡೋಸ್ ಕೋವಾಕ್ಸಿನ್ ಅನ್ನು ಪೂರೈಸಲು ಒಪ್ಪಿಕೊಂಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ನಮ್ಮ ಆತ್ಮೀಯ ಕೃತಜ್ಞತೆಯನ್ನು ಹೇಳಲು ನಾನು ಬಯಸುತ್ತೇನೆ” ಅವರು ಹೇಳಿದ್ದಾರೆ.
ಮಾರಿಷಸ್ನ ಭಾರತೀಯ ರಾಯಭಾರ ಕಚೇರಿ ಪಿಎಂ ಜುಗ್ನಾಥ್ ಅವರ ವಿಡಿಯೋವನ್ನು ಟ್ವೀಟ್ ಮಾಡಿ ಭಾರತ ಸರ್ಕಾರವನ್ನು ಶ್ಲಾಘಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ.
ಕೋವಿಡ್-19ನಿಂದ ಜಗತ್ತನ್ನು ಮುಕ್ತಗೊಳಿಸುವ ಪ್ರಯತ್ನವಾಗಿ ಭಾರತವು ‘ಲಸಿಕೆ ಮೈತ್ರಿ’ ಉಪಕ್ರಮದಡಿಯಲ್ಲಿ 200,000 ಡೋಸ್ ಕೋವಾಕ್ಸಿನ್ ಲಸಿಕೆಗಳನ್ನು ವಾಣಿಜ್ಯವಾಗಿ ಮಾರಿಷಸ್ಗೆ ಹಸ್ತಾಂತರಿಸಿತು. ಸಮಾರಂಭದಲ್ಲಿ 2,00,000 ಡೋಸ್ ಕೊರೊನಾವೈರಸ್ ಲಸಿಕೆಗಳನ್ನು ಮಾರಿಷಸ್ಗೆ ಹಸ್ತಾಂತರಿಸಲಾಗಿದೆ ಎಂದು ಮಾರಿಷಸ್ನ ಭಾರತದ ಹೈ ಕಮಿಷನ್ ತಿಳಿಸಿದೆ.
Thank you Hon’ble PM @JugnauthKumar for your kind words of appreciation to the Government of India for the supply of Covid-19 vaccines to Mauritius #IndiaMauritius 🇮🇳🤝🇲🇺#VaccineMaitri @MEAIndia @IndianDiplomacy @PMOIndia @DrSJaishankar @harshvshringla pic.twitter.com/ahasrqoSR6
— India in Mauritius (@HCI_PortLouis) March 24, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.