ಬೆಂಗಳೂರು: ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟೆನಯ ಅಧ್ಯಕ್ಷೆಯಾಗಿ ಅಧಿಕಾರ ಪಡೆದ ರಶ್ಮಿ ಸಾಮಂತ್ ಅಲ್ಲಿನ ವಿದ್ಯಾರ್ಥಿಗಳಿಂದ ಎದುರಿಸಿದ ವಿರೋಧಗಳ ನಂತರ ಕೆಲವೇ ದಿನಗಳಲ್ಲಿ ರಾಜಿನಾಮೆ ನೀಡಿದ್ದರು. ಈ ಬಗ್ಗೆ ಅಲ್ಲಿನ ಯುಕೆ ಪೊಲೀಸರು ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ತನಿಖೆ ಪ್ರಾರಂಭಿಸಿದೆ.
ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ವಿದ್ಯಾರ್ಥಿ ರಶ್ಮಿ ಸಾಮಂತ್ ಅವರು, “ಟ್ರಾನ್ಸ್ಫೋಬಿಯಾ, ವರ್ಣಭೇದ ನೀತಿ ಮತ್ತು ಸೆಮಿಟಿಸಂ ವಿರೋಧಿ” ಆರೋಪದ ಮೇಲೆ ರಾಜೀನಾಮೆ ನೀಡಬೇಕಾಯಿತು.
ಅವರ ಮೇಲೆ ಹೊರಿಸಲಾಗಿರುವ ಅರೋಪಗಳು ಆಧಾರ ರಹಿತ ಎಂದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಇವರ ಮೇಲೆ ಹಿಂದೂ ವಿರೋಧಿ ಮನೋಭಾವ ಅಲ್ಲಿನ ವಿದ್ಯಾರ್ಥಿಗಳಲ್ಲಿ ಇದ್ದ ಪರಿಣಾಮ ಇಂತಹ ಆರೋಪ ಹೊರಿಸಲಾಗಿದೆ ಎಂದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ.
ಆಕ್ಸ್ಫರ್ಡ್ನಲ್ಲಿ ಎಂಎಸ್ಸಿ ವಿದ್ಯಾರ್ಥಿಯಾಗಿದ್ದ ಸಾಮಂತ್ ತನ್ನ ಕೋರ್ಸ್ನ ಐದು ತಿಂಗಳ ಅವಧಿಗೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅದರ ನಂತರ ಅವರ ವಿರುದ್ಧ ಅಭಿಯಾನ ಆರಂಭವಾಗಿತ್ತು. ಸಾಮಂತ್ ಅವರ ರಾಜಿನಾಮೆ ನಿರ್ಧಾರಕ್ಕೆ ಪ್ರಮುಖ ಒತ್ತಡವನ್ನು ತಂದೊಡ್ಡಿದ್ದು ಭಾರತೀಯ ಮೂಲದ ಉಪನ್ಯಾಸಕ ಅಭಿಜಿತ್ ಸರ್ಕಾರ್ ಎಂಬವರು ಎಂಬುದೂ ತಿಳಿದು ಬಂದಿದೆ. ರಶ್ಮಿ ಅವರನ್ನು ಅವಮಾನಿಸುವುದು, ಅವರ ವಿರುದ್ಧ ಟೀಕಾ ಪ್ರಹಾರಗಳನ್ನು ನಡೆಸುವುದು ಮೊದಲಾದ ಕೆಲಸಗಳನ್ನೂ ಸರ್ಕಾರ್ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಆರೋಪ ಅಂಶಗಳನ್ನು ಪರಿಗಣಿಸಿ ರಶ್ಮಿ ಸಾಮಂತ್ ಅವರಿಗೆ ಕಿರುಕುಳ ನೀಡಲಾಗಿದೆ ಎಂದು ಹಿಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಶರ್ಮಾ ದೂರು ನೀಡಿದ್ದಾರೆ.
ಈ ಘಟನೆಯ ನಂತರ ತನ್ನ ಹುಟ್ಟೂರು ಉಡುಪಿಗೆ ಬಂದ ಸಾಮಂತ್ ಅವರು ಪ್ರಸ್ತುತ ಆನ್ಲೈನ್ ಉಪನ್ಯಾಸಗಳಲ್ಲಿ ಹಾಜರಾಗುತ್ತಿದ್ದಾರೆ. ತೀವ್ರ ಟೀಕೆಯ ಒತ್ತಡದಿಂದಾಗಿ ಆಸ್ಪತ್ರೆಯನ್ನು ಸೇರಿದ್ದೆ, ಹೀಗಾಗಿ ಅವರು ಆಕ್ಸ್ಫರ್ಡ್ಗೆ ಮತ್ತೆ ಹಿಂತಿರುಗುವುದು ಸುರಕ್ಷಿತವಲ್ಲ ಎನಿಸುತ್ತಿದೆ ಎಂದು ಸಾವಂತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.