ಮಾಸ್ಕೋ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಕೊರೋನಾ ನಿರೋಧಕಕ್ಕೆ ಪೂರಕವಾಗಿ ಔಷಧೀಯ ವಸ್ತುಗಳು ಮತ್ತು ಲಸಿಕೆಗಳನ್ನು ಪೂರೈಸುವುದರಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿತ್ತು. ಈ ಸಾಲಿಗೆ ರಷ್ಯಾದ ಸ್ಪುಟ್ನಿಕ್ ವಿ ಕೊರೋನಾ ವೈರಸ್ ಲಸಿಕೆಯನ್ನು ಉತ್ಪಾದಿಸಬೇಕೆಂಬ ಮನವಿಗೆ ಭಾರತದ ಸಂಸ್ಥೆಯೊಂದು 200 ಮಿಲಿಯನ್ ಡೋಸ್ ಲಸಿಕೆಯನ್ನು ತಯಾರಿಸಲು ಸಿದ್ಧವಾಗಿರುವುದಾಗಿ ತಿಳಿಸಿದೆ ಎಂದು ರಷ್ಯಾ ಲಸಿಕೆಯ ಪಾಲುದಾರ ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.
ಭಾರತದಿಂದ ಪ್ರತಿ ವರ್ಷ 200 ಮಿಲಿಯನ್ ಡೋಸ್ ರಷ್ಯಾ ಲಸಿಕೆ ಪಡೆಯಲು ವಿರ್ಚೋ ಗ್ರೂಪ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ದೇಶದ ಸಾರ್ವಜನಿಕ ಆರ್ಥಿಕ ನಿಧಿ ರಷ್ಯದ ನೇರ ಹೊಡಿಕೆ ಫಂಡ್ ಹೇಳಿಕೆಯಲ್ಲಿ ತಿಳಿಸಿದೆ. ವಿರ್ಚೋ ಗ್ರೂಪ್ 2021ರ ಮಧ್ಯಭಾಗದಿಂದ ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸುವ ಸಾಧ್ಯತೆಯಿದೆ.
ಭಾರತದಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆಯನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಂಡು, ವಿದೇಶಗಳಿಗೆ ಪೂರೈಕೆ ಮಾಡಲು ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಆರ್ ಡಿಐಎಫ್ ಸಿಎಫ್ ಒ ಡೆಮಿಟ್ರಿವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.