ನವದೆಹಲಿ: ಜಾರ್ಖಂಡ್ನ ಗರ್ಹ್ವಾ ಜಿಲ್ಲೆಯಲ್ಲಿ ನಡೆದ ಘರ್ ವಾಪಸಿ ಕಾರ್ಯಕ್ರಮವೊಂದರಲ್ಲಿ 33 ಕುಟುಂಬಗಳ 181 ಕ್ರೈಸ್ತರು ಮರಳಿ ಸರ್ನಾ ಸಮುದಾಯಕ್ಕೆ ಮತಾಂತರಗೊಂಡರು.
ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದು ತಪ್ಪು ಎಂದು ಒಪ್ಪಿಕೊಂಡ ಕುಟುಂಬಗಳು ಹಿಂದಿನ ತಪ್ಪನ್ನು ಸರಿಪಡಿಸಲು ನಿರ್ಧರಿಸಿವೆ.
ಕಾರ್ಯಕ್ರಮದಲ್ಲಿ, ಸರಿಯಾದ ಆಚರಣೆಗಳನ್ನು ಅನುಸರಿಸಿದ ನಂತರ ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.
ಸರ್ನಾ ಬುಡಕಟ್ಟು ಪಂಥವಾಗಿದ್ದು, ಇದನ್ನು ಸನಾತಾನಿ ಎಂದು ಪರಿಗಣಿಸಲಾಗುತ್ತದೆ. ಪ್ರಕೃತಿಯನ್ನು ಅದರ ವಿವಿಧ ರೂಪಗಳಲ್ಲಿ ಇವರು ಪೂಜಿಸುತ್ತಾರೆ.
ಮತಾಂತರಗೊಂಡ ಜನರು ತಮ್ಮ ಪೂರ್ವಜರನ್ನು ಮಿಷನರಿಗಳು ಮತಾಂತರಗೊಳಿಸಿದರು ಎಂದು ಪತ್ರಿಕೆಗಳಿಗೆ ತಿಳಿಸಿದ್ದಾರೆ. ಸಮಯ ಕಳೆದಂತೆ, ಅದು ತಪ್ಪು ಎಂದು ತಾವು ಅರಿತುಕೊಂಡರು ಎಂದಿದ್ದಾರೆ.
ದೇಶದಲ್ಲಿ ಅಂದಾಜು 40 ಲಕ್ಷ ಸರ್ನಾಗಳಿದ್ದಾರೆ. ಜಾರ್ಖಂಡ್ನಲ್ಲಿ ಸುಮಾರು 35 ಲಕ್ಷ ಜನರು ವಾಸಿಸುತ್ತಿದ್ದಾರೆ. ಉಳಿದವರು ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಹರಡಿಕೊಂಡಿದ್ದಾರೆ.
ಕ್ರಿಶ್ಚಿಯನ್ ಮಿಷನರಿಗಳು ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.