ನವದೆಹಲಿ: ಭಾರತ ಸರ್ಕಾರ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸೋಮವಾರ ಪ್ರಕಟಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಡೆಸುತ್ತಿರುವ ಈ ಸಮಾರಂಭದಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ, ಮತ್ತು ಮರಾಠಿ ಸೇರಿದಂತೆ ದೇಶದ ವಿವಿಧ ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸುತ್ತದೆ. ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. 2019 ಕ್ಕೆ ಪ್ರಶಸ್ತಿ ಘೋಷಿಸಲಾಗಿದೆ.
ಈ ವರ್ಷ, ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರ್ ಅತ್ಯುತ್ತಮ ಹಿಂದಿ ಚಲನಚಿತ್ರವಾಗಿ ಪ್ರಶಸ್ತಿ ಪಡೆದರೆ, ನಟಿ ಕಂಗನಾ ರನೌತ್ ಅವರು ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಮತ್ತು ಪಂಗಾ ಅಭಿನಯಕ್ಕಾಗಿ ಅತ್ಯುತ್ತಮ ಚಲನಚಿತ್ರ ನಟಿ ಗೌರವವನ್ನು ಪಡೆದರು.
ಅತ್ಯುತ್ತಮ ಫೀಚರ್ ಫಿಲ್ಮ್: ಮರಕ್ಕರ್ ಲಯನ್ ಆಫ್ ದಿನ ಅರೇಬಿಯನ್ ಸೀ
ಅತ್ಯುತ್ತಮ ಎಡಿಟಿಂಗ್ ಫಿಲ್ಮ್: ಜೆರ್ಸಿ (ತೆಲುಗು)
ಅತ್ಯುತ್ತಮ ಆಡಿಯೋಗ್ರಫಿ: ಖಾಸಿ
ಅತ್ಯುತ್ತಮ ಚಿತ್ರಕಥೆ: ಗುನ್ನಾಮಿ
ಅತ್ಯುತ್ತಮ ಛಾಯಾಗ್ರಹಣ: ಜಲ್ಲಿಕಟ್ಟು
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: ಬಾರ್ಡೋ
ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಬಿ ಪ್ರಾಕ್
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ
ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ
ಅತ್ಯುತ್ತಮ ನಟಿ: ಕಂಗನಾ ರನೌತ್ (ಮಣಿಕರ್ನಿಕಾ ಮತ್ತು ಪಂಗಾ)
ಅತ್ಯುತ್ತಮ ನಟ: ಮನೋಜ್ ಬಾಜಪೇಯಿ (ಭೋಸ್ಲೆ)
ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
ಅತ್ಯುತ್ತಮ ತುಳು ಚಿತ್ರ: ಪಿಂಗಾರ
ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
ಅತ್ಯುತ್ತಮ ತಮಿಳು ಚಿತ್ರ: ಅಸುರನ್
ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.