ರಿಯಾದ್: ಪಾಕಿಸ್ಥಾನ, ಬಾಂಗ್ಲಾದೇಶ, ಚಡ್ ಮತ್ತು ಮಯನ್ಮಾರಿನ ಮಹಿಳೆಯರನ್ನು ತನ್ನ ದೇಶದ ಪುರುಷರು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಪಾಕ್ ಪತ್ರಿಕೆ ಡಾನ್ ವರದಿ ಮಾಡಿದೆ.
ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ.
ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ ಎಂದು ಮಕ್ಕಾ ಪೊಲೀಸ್ ಡೈರೆಕ್ಟರ್ ಮೇಜರ್ ಜನರಲ್ ಅಸ್ಸಫ್ ಅಲ್-ಕುರಾಶಿ ಅವರನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಈ ಕ್ರಮವು ಸೌದಿ ಪುರುಷರನ್ನು ವಿದೇಶಿಯರನ್ನು ಮದುವೆಯಾಗುವುದನ್ನು ನಿರುತ್ಸಾಹಗೊಳಿಸುವ ಗುರಿಯನ್ನು ಹೊಂದಿದೆ ಮತ್ತು ವಿದೇಶಿಯರೊಂದಿಗೆ ವಿವಾಹಕ್ಕೆ ಅನುಮತಿ ನೀಡುವ ಮೊದಲು ಹೆಚ್ಚುವರಿ ಔಪಚಾರಿಕತೆಗಳನ್ನು ಇರಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.
ವಿದೇಶಿ ಮಹಿಳೆಯರನ್ನು ಮದುವೆಯಾಗಲು ಬಯಸುವವರು ಮೊದಲು ಸರ್ಕಾರದ ಒಪ್ಪಿಗೆ ಪಡೆಯಬೇಕು ಮತ್ತು ಅಧಿಕೃತ ಮಾರ್ಗಗಳ ಮೂಲಕ ಮದುವೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕುರಾಶಿ ಹೇಳಿದ್ದಾರೆ.
ಅರ್ಜಿದಾರರು 25 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಸ್ಥಳೀಯ ಜಿಲ್ಲಾ ಮೇಯರ್ ಸಹಿ ಮಾಡಿದ ಗುರುತಿನ ದಾಖಲೆಗಳು ಮತ್ತು ಅವರ ಕುಟುಂಬ ಕಾರ್ಡ್ನ ಪ್ರತಿ ಸೇರಿದಂತೆ ಇತರ ಎಲ್ಲಾ ಗುರುತಿನ ಪತ್ರಗಳನ್ನು ಲಗತ್ತಿಸಬೇಕು ಎಂದಿದ್ದಾರೆ.
“ಅರ್ಜಿದಾರನು ಈಗಾಗಲೇ ಮದುವೆಯಾಗಿದ್ದರೆ, ಅವನು ತನ್ನ ಹೆಂಡತಿ ಅಂಗವಿಕಲೆ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದಾಳೆ ಅಥವಾ ಮಕ್ಕಳು ಆಗದವಳು ಎಂದು ಸಾಬೀತುಪಡಿಸುವ ಆಸ್ಪತ್ರೆಯ ವರದಿಯನ್ನು ಲಗತ್ತಿಸಬೇಕು” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.