ಉಡುಪಿ: ಅಯೋಧ್ಯೆಯಲ್ಲಿ ಇನ್ನೇನು ಕೆಲವೇ ವರ್ಷಗಳಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದ್ದು, ಈ ಮಂದಿರಕ್ಕೆ ಕರ್ನಾಟಕದ ಉಡುಪಿ ಜಿಲ್ಲೆಯ ಕೊಟೇಶ್ವರದ ಕುಂಭಾಶಿಯಲ್ಲಿ ಬ್ರಹ್ಮರಥದ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ಪ್ರಸಿದ್ಧ ಕುಶಲಕರ್ಮಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಅವರ ತಂಡ ಈ ರಥದ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಿದೆ. ಈ ಹಿಂದೆಯೂ ಅನೇಕ ದೇವಾಲಯಗಳಿಗೆ ಈ ವರೆಗೆ ಸುಮಾರು 172 ರಷ್ಟು ರಥಗಳನ್ನು ಚಿನ್ನ, ಬೆಳ್ಳಿ ಮತ್ತು ಮರದಿಂದ ನಿರ್ಮಿಸಿಕೊಟ್ಟಿರುವ ಕೀರ್ತಿಯನ್ನು ಹೊಂದಿರುವ ಈ ತಂಡ ಅಯೋಧ್ಯೆಯ ಶ್ರೀರಾಮನ ಮಂದಿರಕ್ಕೂ ಬ್ರಹ್ಮರಥ ನಿರ್ಮಿಸಿ ಕೊಡಲಿದೆ. ಈ ನಿರ್ಮಾಣ ಕಾರ್ಯ ಮುಂದಿನ ಎರಡೂವರೆ ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿರುವುದಾಗಿಯೂ ಮೂಲಗಳು ತಿಳಿಸಿವೆ.
ಅಯೋಧ್ಯಾ ಶ್ರೀರಾಮ ಮಂದಿರದ ಬ್ರಹ್ಮ ರಥವು 10 ಅಡಿ ವ್ಯಾಸಗಳನ್ನು ಹೊಂದಿರುವ ಚಕ್ರಗಳನ್ನು ಒಳಗೊಂಡಿರಲಿವೆ. 20 ಅಡಿ ಎತ್ತರ, ಎಂಟು ಅಡಿ ಎತ್ತರದ ಪೀಠ, ಧ್ವಜಗಳು ಮತ್ತು ನಾಣ್ಯಗಳಿಂದ ಅಲಂಕರಿಸಲ್ಪಟ್ಟ 36 ಅಡಿ ಎತ್ತರದ ಗೋಲಾಕಾರದ ರಚನೆ, 5 ಅಡಿ ಎತ್ತರದ ಕಮಾನು, ರಥದ ಮೇಲೆ 5 ಅಡಿಗಳ ಕಲಶ ಮೊದಲಾದವುಗಳನ್ನು ಒಳಗೊಂಡಿರಲಿದೆ. ರಥದ ನಿರ್ಮಾಣಕ್ಕಾಗಿ ಉತ್ತರಾಖಂಡ್ನಿಂದ ತೇಗದ ಮರಗಳನ್ನು ತರಲಾಗುತ್ತದೆ. ರಥದ ಚಕ್ರಗಳ ನಿರ್ಮಾಣಕ್ಕೆ ಮಲಬಾರಿ ಈರನ್ವುಡ್ ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ರಥದಲ್ಲಿ ರಾಮಾಯಣದ ದೃಶ್ಯಗಳನ್ನು ಸಷ್ಟಿಸಲಾಗುವುದಾಗಿಯೂ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.