ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಮಿಷನ್ ‘ಗಗನಯಾನ’ಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಲಭಿಸಿದ್ದು, ರಷ್ಯಾದಲ್ಲಿ ಮಿಷನ್ಗಾಗಿ ನಾಲ್ಕು ಗಗನಯಾತ್ರಿಗಳ ತರಬೇತಿ ಈ ತಿಂಗಳು ಪೂರ್ಣಗೊಳ್ಳಲಿದೆ ಎಂದು ಮೂಲಗಳು ವರದಿ ಮಾಡಿವೆ.
ರಷ್ಯಾದಲ್ಲಿ ಭಾರತೀಯ ಗಗನಯಾತ್ರಿಗಳ ತರಬೇತಿಯ ನಂತರ ನಾಲ್ಕು ಗಗನಯಾತ್ರಿಗಳ ಎರಡನೇ ಹಂತದ ತರಬೇತಿಯು ಮಾಡ್ಯೂಲ್-ನಿರ್ದಿಷ್ಟವಾಗಿರುತ್ತದೆ. ಗಗನಯಾತ್ರಿಗಳ ಎರಡನೇ ಹಂತದ ತರಬೇತಿ ಭಾರತದಲ್ಲಿಯೇ ನಡೆಯಲಿದೆ.
ಇಡೀ ಗಗನಯಾನ ಮಿಷನ್ಗೆ ಸುಮಾರು 9,023 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಇದು ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಮುನ್ನ ಅಥವಾ ಅದೇ ಸಂದರ್ಭದಲ್ಲಿ ಪ್ರಾರಂಭವಾಗಲಿದೆ. ಈ ಮಿಷನ್ ಅಡಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಭಾರೀ ಗಾತ್ರದ ಉಡಾವಣಾ ವಾಹಕ ‘ಬಾಹುಬಲಿ’ ಜಿಎಸ್ಎಲ್ವಿ ಮಾರ್ಕ್ -3 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.
“ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟಕ್ಕಾಗಿ ನಾಲ್ಕು ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿದೆ. ರಷ್ಯಾದಲ್ಲಿ ಅವರ ಒಂದು ವರ್ಷದ ತರಬೇತಿ ಈ ತಿಂಗಳು ಪೂರ್ಣಗೊಳ್ಳುತ್ತಿದೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಇದು ಸ್ವಲ್ಪ ವಿಳಂಬವಾಗಿದೆ” ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.