ನವದೆಹಲಿ: ದೇಶದ ಜವಳಿ ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೇಡಿಕೆ ನಿರ್ಮಾಣವಾಗಲು, ಬೃಹತ್ ಮಟ್ಟದ ಹೂಡಿಕೆ ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ದೇಶದ ಪ್ರಮುಖ ಸ್ಥಳಗಳಲ್ಲಿ ಏಳು ಮೆಗಾ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಕೇಂದ್ರ ಬಜೆಟ್ನಲ್ಲಿ ಘೋಷಿಸಿದಂತೆ ಎಂಎಂಎಫ್ ಮತ್ತು ತಾಂತ್ರಿಕ ಜವಳಿ ಕ್ಷೇತ್ರವನ್ನು ಒಳಗೊಂಡ ಐದು ವರ್ಷಗಳ ಅವಧಿಯ 10,683 ಕೋಟಿ ರೂ.ಗಳ ಉತ್ಪಾದನಾ ಸಂಬಂಧಿತ ಹೂಡಿಕೆ ಯೋಜನೆಯು ರಫ್ತುಗಳಲ್ಲಿ ಜಾಗತಿಕ ಚಾಂಪಿಯನ್ಗಳನ್ನು ಸೃಷ್ಟಿಸಲಿದೆ. ದೇಶಿಯ ಉತ್ಪಾದನೆಯಲ್ಲಿ ಜವಳಿ ಕ್ಷೇತ್ರವೂ ಅಭಿವೃದ್ಧಿ ಹೊಂದಲಿದೆ ಎಂದು ಲಿಖಿತ ಉತ್ತರದಲ್ಲಿ ಸಚಿವರು ಹೇಳಿದ್ದಾರೆ.
ಜವಳಿ ಕ್ಷೇತ್ರದ ಉತ್ತೇಜನದ ಉಪಕ್ರಮದ ಭಾಗವಾಗಿ, ತಿದ್ದುಪಡಿ ಮಾಡಿದ ತಂತ್ರಜ್ಞಾನದ ನವೀಕರಣ ನಿಧಿ ಯೋಜನೆ, ವಿದ್ಯುತ್ ಚಾಲಿತ ಮಗ್ಗಗಳ ಅಭಿವೃದ್ಧಿ, ತಾಂತ್ರಿಕ ಜವಳಿ ಯೋಜನೆಗಳು, ಸಂಯೋಜಿತ ಜವಳಿ ಪಾರ್ಕ್ಗಳಿಗೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ನುಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.