ಪುಣೆ: ಜನ್ಮದಿನದಂದು ಕೇಕ್ ಕತ್ತರಿಸುವ ಕಾರ್ಯಕ್ರಮ ಈಗ ಎಲ್ಲೆಡೆಯೂ ಸರ್ವೇ ಸಾಮಾನ್ಯ. ಆದರೆ ಮಹಾರಾಷ್ಟ್ರದ ಹಲವು ಪ್ರದೇಶಗಳ ಹಣ್ಣಿನ ಬೆಳೆಗಾರರು ಬೇಕರಿ ಕೇಕ್ ಬದಲು ಹಣ್ಣುಗಳ ಕೇಕ್ ಬಳಸುವಂತೆ ಹೊಸ ಅಭಿಯಾನವೊಂದನ್ನು ಆರಂಭ ಮಾಡಿದ್ದಾರೆ.
ಸದ್ಯ ಈ ಅಭಿಯಾನವು ಕೃಷಿಕರ ವಲಯದಲ್ಲಿಯೇ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ತಾವು ಬೆಳೆದ ಹಣ್ಣು ತರಕಾರಿಗಳನ್ನು ಮಾರಾಟ ಮಾಡಲು ಈ ಅಭಿಯಾನವನ್ನು ಆರಂಭ ಮಾಡಲಾಗಿದ್ದು, ಆ ಮೂಲಕ ಬೆಳೆಗಾರರನ್ನು ಪ್ರೋತ್ಸಾಹಿಸುವ, ಪ್ರೇರೆಪಿಸುವ ಸಲುವಾಗಿ ಈ ಅಭಿಯಾನ ಕಾರ್ಯರೂಪಕ್ಕೆ ಬಂದಿದೆ.
ಮಹಾರಾಷ್ಟ್ರದಲ್ಲಿ ಹಲವು ಕಡೆಗಳಲ್ಲಿ ಹಣ್ಣಿನ ಉತ್ಪಾದನೆ ಹೆಚ್ಚಾಗಿದೆ, ಪರಿಣಾಮ ರೈತರು ಸಹಜವಾಗಿ ಹಣ್ಣುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಕಾರಣಕ್ಕಾಗಿ ರೈತರು ಹಣ್ಣುಗಳ ಕೇಕ್ ತಯಾರಿಸುವಂತೆ ಮತ್ತು ಅದನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಅಭಿಯಾನವನ್ನು ಗಮನಿಸಿರುವ ಕೃಷಿ ತಜ್ಞರು, ಇದು ಹಣ್ಣುಗಳನ್ನು ಬೆಳೆಯುವ ಕೃಷಿಕರಿಂದ ನಡೆಯುತ್ತಿರುವ ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಹಣ್ಣುಗಳ ಕೇಕ್ ಕೃಷಿಕರಿಗೆ ಸುಸ್ಥಿರ ಮಾರುಕಟ್ಟೆಯನ್ನು ಒದಗಿಸುವುದಕ್ಕೂ ಸಹಕಾರಿಯಾಗುವ ಸಾಧ್ಯತೆಗಳಿರುವುದಾಗಿ ವಿಶ್ಲೇಷಣೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.