ಪುದುಚೇರಿ: ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಡಿಎಂಕೆ-ಎಐಎನ್ಆರ್ಸಿ-ಬಿಜೆಪಿ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ. ಈವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ – ಡಿಎಂಕೆ ಮೈತ್ರಿಕೂಟ ಸೋಲನ್ನು ಅನುಭವಿಸಲಿದೆ ಎಂದು ʼಏಷ್ಯಾನೆಟ್ ನ್ಯೂಸ್ ಸಿ ಫೋರ್ʼ ಸಮೀಕ್ಷೆ ಹೇಳಿದೆ.
ಒಟ್ಟು 30 ವಿಧಾನಸಭಾ ಕ್ಷೇತ್ರಗಳಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಏಪ್ರಿಲ್ 6 ರಂದು ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಣ್ಣಾ ಡಿಎಂಕೆ – ಬಿಜೆಪಿ ಹಾಗೂ ಮುಖ್ಯಮಂತ್ರಿ ಎನ್ಆರ್ ಕಾಂಗ್ರೆಸ್ ಒಳಗೊಂಡ ಕೂಟ 23 ರಿಂದ 27 ಸ್ಥಾನ ಗಳಿಸಲಿದ್ದು, ಮೂರನೇ ಎರಡರಷ್ಟು ಬಹುಮತ ಪಡೆಯಲಿವೆ. ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಕೇವಲ 3ರಿಂದ 7 ಹಾಗೂ ಇತರರು ಗರಿಷ್ಠ 1 ಸ್ಥಾನ ಗಳಿಸಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಒಟ್ಟು ಮತಗಳಿಕೆಯಲ್ಲೂ ಅಣ್ಣಾಡಿಎಂಕೆ -ಎಐಎನ್ಆರ್ಸಿ-ಬಿಜೆಪಿ ಮೈತ್ರಿಕೂಟ 52% ರಷ್ಟು ಮತ ಪ್ರಗತಿ ಕಾಣಲಿದೆ. ಕಳೆದ ಚುನಾವಣೆಯಲ್ಲಿ ಪ್ರತಿಶತ 39 ರಷ್ಟು ಮತ ಗಳಿಸಿದ ಈ ಮೈತ್ರಿಕೂಟ. ಈ ಸಲ 36% ರಷ್ಟು ಮತ ಗಳಿಸಲಿದೆ. ಇತರರು 12% ರಷ್ಟು ಮತ ಗಳಿಸಲಿದ್ದಾರೆ ಎಂದು ಈ ಸಮೀಕ್ಷಾ ವರದಿ ನೀಡಿದೆ.
ಕಾಂಗ್ರೆಸ್ನ ನಿರ್ಗಮಿತ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ನೇತೃತ್ವದ ಆಡಳಿತದ ಬಗ್ಗೆ ಸಮೀಕ್ಷೆಯಲ್ಲಿ 44% ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆ ರಾಷ್ಟ್ರ ರಾಜಕಾರಣವನ್ನು ಪ್ರತಿನಿಧಿಸಿದ್ದು ಮೋದಿ ಆಡಳಿತದ ಪರ ಒಲವು ವ್ಯಕ್ತಪಡಿಸಿದ್ದಾರೆ. ಒಟ್ಟು 5 ಸಾವಿರಕ್ಕೂ ಹೆಚ್ಚಿನ ಜನರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.