ಉಡುಪಿ : ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹದು ಎಂಬ ಬಗ್ಗೆ ಸರ್ಕಾರ ಯಾವುದೇ ಚಿಂತೆ ಮಾಡುತ್ತಿಲ್ಲ. ಆದರೆ ಇಲ್ಲೊಬ್ಬರು ಮನೆಯ ತಾರಸಿನ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಅವರೇ ವಿಜಯ್ ಕುಮಾರ್.
ಭಾರತದಂತ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಗೆ ಕಾಡುತ್ತಿರುವ ಪ್ರಮುಖ ಎರಡು ಸಮಸ್ಯೆಗಖೆಂದರೆ ಇಂಧನ ಮತ್ತು ವಿದ್ಯುತ್. ಈ ಎರಡು ಶಕ್ತಿಯ ಮೂಲಗಳಿಗಾಗಿ ಪ್ರತಿ ವರ್ಷ ನಮ್ಮ ದೇಶ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸುತ್ತಿದೆ. ವಿದ್ಯುತ್ ಉತ್ಪಾದನೆಗಾಗಿ ನಿಡ್ಡೋಡಿ ನಾಗಾರ್ಜುನದಂತಹ ಅಪಾಯಕಾರಿ ಉಷ್ಣ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ನೈಸರ್ಗಿಕವಾಗಿ ಸಿಗುವ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹದು ಎಂಬ ಬಗ್ಗೆ ಸರ್ಕಾರ ಯಾವುದೇ ಚಿಂತೆ ಮಾಡುತ್ತಿಲ್ಲ.
ಆದರೆ ವಿಜಯ್ ಕುಮಾರ್ ಮನೆಯ ತಾರಸಿನ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ ವಿದ್ಯುತ್ ಸ್ವಾವಲಂಬನೆಯನ್ನು ಹೊಂದಿದಷ್ಟೇ ಅಲ್ಲದೇ ಸರ್ಕಾರಕ್ಕೆ ವಿದ್ಯುತ್ ನೀಡುವಷ್ಟು ಮುಂದಾಗಿದ್ದಾರೆ. ದಿನವೊಂದಕ್ಕೆ ಸರಾಸರಿ 40 ಯುನಿಟ್ನಷ್ಟು ಉತ್ಪಾದನೆ ಮಾಡುತ್ತಿದ್ದಾರೆ. ಮೂಲತಃ ಬೇಕರಿ ಉದ್ಯಮಿ ಆದರೆ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಒಂದು ಸಂದೇಶ ನೀಡುವುದರಲ್ಲಿ ಇವರದ್ದು ಯಾವತ್ತೂ ಒಂದು ಕೈ ಮೊದಲು. ಸುಮಾರು 9 ಲಕ್ಷ ರೂ ವೆಚ್ಚದಲ್ಲಿ ಉಡುಪಿಯ ಚಿತ್ಪಾಡಿಯಲ್ಲಿರುವ ತನ್ನ ಮನೆಯಲ್ಲಿ ಈ ಯೂನಿಟ್ನನು ಇವರು ನಿರ್ಮಿಸಿಕೊಂಡಿದ್ದಾರೆ. ಸರ್ಕಾರಿ ಇಲಾಖೆಗಳ ಬೆನ್ನು ಬಿದ್ದು ಇದರ ಮಾಹಿತಿ ಸಂಗ್ರಹಿಸಿ ಸುಮಾರು 8 ಲಕ್ಷದಷ್ಟು ಸಾಲವನ್ನು ಪಡೆದುಕೊಂಡು ಈ ಸೌರ ವಿದ್ಯುತ್ ಘಟಕವನ್ನು ಪ್ರಾರಂಭಿಸಿದ್ದಾರೆ.
ಯೂನಿಟ್ಗೆ ಒಂಬತ್ತು ರೂಪಾಯಿಯಂತೆ ಇವರಿಗೆ ಮೆಸ್ಕಾಂ ಇಲಾಖೆ ಪಾವತಿ ಮಾಡುವುದಾಗಿ ಭರವಸೆ ನೀಡಿದೆ. ತಿಂಗಳಿಗೆ ಸುಮಾರು 11 ಸಾವಿರದಷ್ಟು ಆದಾಯ ಇದರಿಂದ ಬರಲಿದ್ದು, ಸಾಲದ ಕಂತು 8 ಸಾವಿರ ರೂ ಇದರಲ್ಲಿ ಸರಿಹೊಂದಿಸಬಹುದು. 25ವರ್ಷಗಳ ಕಾಲ ಈ ಯಂತ್ರೋಪಕರಣಗಳು ಅಚ್ಚು ಕಟ್ಟಾಗಿ ಕೆಲಸ ಮಾಡುತ್ತದೆ ಎಂದು ಅರ್ಬ್ ಕಂಪನಿ ಭರವಸೆ ನೀಡಿದೆ. ಮನೆ ಮನೆಗಳಲ್ಲಿ ಈ ರೀತಿಯ ಸೌರ ವಿದ್ಯುತ್ ಘಟಕಗಳನ್ನು ಪ್ರಾರಂಭಿಸಿದ್ದೇ ಆದಲ್ಲಿ ಪರಿಸರಕ್ಕೆ ಮತ್ತು ಜನಜೀವನಕ್ಕೆ ಮಾರಕವಾದ ನೂರಾರು ಉಷ್ಣ ವಿದ್ಯುತ್ ಸ್ಥಾವರವನ್ನು ತಡೆಯಬಹುದು ಎನ್ನುತ್ತಾರೆ ವಿಜಯ್ ಕುಮಾರ್. ಒಟ್ಟಿನಲ್ಲಿ ನೈಸರ್ಗಿಕವಾಗಿ ಸಿಗುವ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ಬಗೆಯ ಇವರ ಮುಖಾಂತರ ತಿಳಿಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.