ಉಡುಪಿ : ಉಡುಪಿಯ ಸಮೀಪದ ವಂಡ್ಸೆ ಎಂಬಲ್ಲಿ ತನ್ನ ಮಾಲಕ ಸಂಬಳ ನೀಡುತ್ತಿಲ್ಲ ಎಂದು ಪ್ರತಿಭಟಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿದ ಫಟನೆ ನಡೆದಿದೆ.
ರಿಂಗ್ ಬಾವಿ ಕೆಲಸ ಮಾಡುತ್ತಿದ್ದು ಕೇರಳದ ಕೊಲ್ಲಂ ಮೂಲದ ಬಿಜು (28) ಎಂಬಾತ ,ತನ್ನಮಾಲಕ ತನಗೆ ಸಂಬಳ ನೀಡಿಲ್ಲವೆಂದು ಮೊಬೈಲ್ ಟವರ್ ಏರಿದ್ದ ಮಾಲೀಕ ಬಿಜುವಿಗೆ 60,000 ರೂಪಾಯಿ ಸಂಬಳ ನೀಡಬೇಕಿತ್ತು. ಬಿಜುಗೆ ವಿಪರೀತ ಕುಡಿಯುವ ಚಟವಿದ್ದ ಕಾರಣ ಅವರು ಹಣ ನೀಡದೆ ಬಿಜು ಮನೆಗೆ ತೆರಳುವಾಗ ನೀಡುತ್ತೇನೆ ಎಂದಿದ್ದರು.
ಹಣಕ್ಕಾಗಿ ಬೇಡಿಕೆ ಇಟ್ಟ ಬಿಜು ವಂಡ್ಸೆ ಪೇಟೆಯಲ್ಲಿದ್ದ 600 ಅಡಿ ಎತ್ತರದ ರಿಲಾಯನ್ಸ್ ಮೊಬೈಲ್ ಟವರ್ ಏರಿದ, ಬಳಿಕ ತಲೆ ತಿರುಗಿ ಸ್ಟಾಂಡ್ ಮೇಲೆ ಒರಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಗ್ಗ ಕಟ್ಟಿ ಬಿಜುವನ್ನು ಕೆಳಗಿಳಿಸಿದರು. ಅಲ್ಲದೆ ವಂಡ್ಸೆಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ರಿಂಗ್ ಮಾಲಿಕ ಸ್ಥಳಕ್ಕಾಗಮಿಸಿ ಕೂಡಲೇ ಸಂಬಳದ ಹಣ ನೀಡುದಾಗಿ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.