ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ, ಇದೀಗ ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಅಂತಿಮ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೊದಲು ತಿಳಿದಂತೆಯೇ ಮೇ 24 ರಿಂದ ಆರಂಭವಾಗಿ, ಜೂನ್ 16 ರ ವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಕೆಲವು ವಿಷಯಗಳ ಪರೀಕ್ಷಾ ದಿನಾಂಕಗಳನ್ನು ಮಾತ್ರ ಬದಲಾವಣೆ ಮಾಡಿ ಈ ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.
ಜೂನ್ 14 ರಂದು ಐಪಿಎಂಎಟಿ ಮತ್ತು ಎನ್ಇಎಸ್ಟಿ ನಡೆಯಲಿರುವ ಕಾರಣ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ನೂತನ ವೇಳಾಪಟ್ಟಿಯನ್ವಯ ಮೇ 24- ಇತಿಹಾಸ, ಮೇ 25- ಕರ್ನಾಟಕ/ಹಿಂದೂಸ್ಥಾನಿ ಸಂಗೀತ, ಮೇ 26- ಭೂಗೋಳ ಶಾಸ್ತ್ರ, ಮೇ 27- ಮನಃಶಾಸ್ತ್ರ/ಮೂಲಗಣಿತ, ಮೇ 28- ತರ್ಕಶಾಸ್ತ್ರ, ಮೇ 29- ಕನ್ನಡ, ಮೇ 31- ಲೆಕ್ಕಶಾಸ್ತ್ರ/ಗಣಿತ/ ಶಿಕ್ಷಣ, ಜೂನ್ 1- ಮಾಹಿತಿ ತಂತ್ರಜ್ಞಾನ/ಹೆಲ್ತ್ಕೇರ್/ ವೆಲ್ನೆಸ್ಬ್ಯೂಟಿ/ಅಟೋಮೊಬೈಲ್, ಜೂನ್ 2- ರಾಜ್ಯಶಾಸ್ತ್ರ/ಗಣಕ ವಿಜ್ಞಾನ, ಜೂನ್ 3 – ಜೀವ ವಿಜ್ಞಾನ/ ಎಲೆಕ್ಟ್ರಾನಿಕ್ಸ್, ಜೂನ್ 4- ಅರ್ಥಶಾಸ್ತ್ರ, ಜೂನ್ 5- ಗೃಹ ವಿಜ್ಞಾನ, ಜೂನ್ 7- ವ್ಯವಹಾರ ಅಧ್ಯಯನ/ ಭೌತವಿಜ್ಞಾನ, ಜೂನ್ 8-ಭೂಗರ್ಭ ವಿಜ್ಞಾನ, ಜೂನ್ 9- ತಮಿಳು/ತೆಲುಗು/ಮಲಯಾಳಂ/ ಮರಾಠಿ/ಅರೇಬಿಕ್/ಫ್ರೆಂಚ್, ಜೂನ್ 10- ಸಮಾಜ ಶಾಸ್ತ್ರ/ ರಸಾಯನ ವಿಜ್ಞಾನ, ಜೂನ್ 11- ಉರ್ದು/ಸಂಸ್ಕೃತ, ಜೂನ್ 12- ಸಂಖ್ಯಾಶಾಸ್ತ್ರ, ಜೂನ್ 14- ಐಚ್ಛಿಕ ಕನ್ನಡ, ಜೂನ್ 15- ಹಿಂದಿ, ಜೂನ್ 16 – ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.