ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಯಾವ ರಾಜ್ಯ ದೇಶಕ್ಕೆ ಮಾದರಿ ಆಗಿತ್ತೋ ಆ ರಾಜ್ಯದಲ್ಲಿಂದು ಬಿ.ಇಡಿ ಸೀಟುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ ನಡೆದಿರುವುದು ಬೇಸರದ ಸಂಗತಿ. ಬಿ.ಇಡಿ ಕೋರ್ಸ್ಗೆ ಡಿಮಾಂಡ್ ಇರುವುದನ್ನು ಅರಿತ ಕೆಲವು ಶಿಕ್ಷಣ ಸಂಸ್ಥೆಗಳು ಒಂದು ರೀತಿಯಲ್ಲಿ ಬಿ.ಇಡಿ ಪ್ರಮಾಣ ಪತ್ರವನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿವೆ ಎಂದು ಅಭಾವಿಪ ಆರೋಪಿಸಿದೆ.
ಬಿ.ಇಡಿ ಕೋರ್ಸ್ ಮಾಡಲು ಬಯಸುವ, ಆದರೆ ತರಗತಿಗಳಿಗೆ ಹಾಜರಾಗಲುವಿಲ್ಲದವರನ್ನು ಆಯ್ಕೆ ಮಾಡಿಕೊಂಡು ಅಕ್ರಮವಾಗಿ ಪ್ರಮಾಣಪತ್ರ ನೀಡಲಾಗುತ್ತಿದೆ. ಈ ಅಕ್ರಮಕ್ಕಾಗಿ ಇಂತಹ ವಿದ್ಯಾರ್ಥಿಗಳಿಂದ ಶುಲ್ಕ ಮಾತ್ರವಲ್ಲದೆ ಹೆಚ್ಚುವರಿ ಹಣ ಪಡೆದುಕೊಳ್ಳಲಾಗುತ್ತದೆ.ಇದಲ್ಲದೆ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದು ಬಂದ ವಿದ್ಯಾರ್ಥಿಗಳಿಂದ ಖಾಸಗಿ ಬಿ.ಇಡಿ ಕಾಲೇಜುಗಳು ಬೇಕಾಬಿಟ್ಟಿ ದುಡ್ದು ವಸೂಲಿ ಮಾಡುತ್ತಿರುವುದು ಖಂಡನಾರ್ಹ ಎಂದು ಅಭಾವಿಪ ಹೇಳಿದೆ.
ಬಿ.ಇಡಿ ಪದವಿ ಪಡೆದುಕೊಳ್ಳಲು ಅಕ್ರಮ ಮಾರ್ಗ ಕಂಡುಕೊಂಡವರು ಕಾಲಕಾಲಕ್ಕೆ ಸಲ್ಲಿಸಬೇಕಾದ ಅಸೈನ್ಮೆಂಟ್ಗಳನ್ನು ಕೂಡ ಕಾಲೇಜಿನವರೇ ಒದಗಿಸುತ್ತಾರೆ. ಅದನ್ನೇ ನೋಡಿಕೊಂಡು ವಿದ್ಯಾರ್ಥಿಗಳು ಅಸೈನ್ಮೆಂಟ್ ಬರೆದುಕೊಡಬಹುದು. ಈ ರೀತಿ ಅಸೈನ್ಮೆಂಟ್ ಒದಗಿಸಿದ್ದಕ್ಕೆ ಇಂತಿಷ್ಟು ಎಂದು ಹಣ ಫಿಕ್ಸ್ ಮಾಡಿಕೊಳ್ಳಲಾಗುತ್ತೆ. ಒಂದು ದಿನವೂ ತರಗತಿಗೆ ಹಾಜರಾಗಿ ಪಾಠ ಕೇಳದೆ ಕೇವಲ ಪರೀಕ್ಷೆಯನ್ನಷ್ಟೇ ಬರೆದು ಬಿ.ಇಡಿ ಪದವಿ ಪ್ರಮಾಣಪತ್ರ ಪಡೆದುಕೊಳ್ಳುವವರು ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವೇ?
ಇಂತಹ ಅಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಬಂದ ಮೇಲೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ದುರದೃಷ್ಟಕರ. ಸರ್ಕಾರ ತಕ್ಷಣವೇ ಬಿ.ಇಡಿ ಕಾಲೇಜುಗಳಲ್ಲಿನ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡವರ ವಿರುದ್ದ ತನಿಖೆ ನಡೆಸಬೇಕೆಂದು ಅಭಾವಿಪ ಆಗ್ರಹಿಸುತ್ತದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.