ನವದೆಹಲಿ: ಮೀನುಗಾರಿಕೆ ಬಂದರುಗಳು ಮತ್ತು ಫಿಶ್ ಲ್ಯಾಂಡಿಂಗ್ ಸೆಂಟರ್ ಅಭಿವೃದ್ಧಿಗೆ ಕೇಂದ್ರವು 3,490 ಕೋಟಿ ರೂ ಒದಗಿಸಲು ಮುಂದಾಗಿದೆ.
ಈ ಕಾರ್ಯ ಕಾರ್ಯಗತಗೊಳ್ಳಲು 2025ನೇ ವರ್ಷದವರೆಗೆ ಕಾಲಾವಕಾಶ ನಿಗದಿಪಡಿಸಲಾಗಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು.
“ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿ 2020-21 ರಿಂದ 2024-25ರವರೆಗೆ ಐದು ವರ್ಷಗಳು ಅವಧಿಗೆ ಮೀನುಗಾರಿಕೆ ಬಂದರುಗಳು ಮತ್ತು ಮೀನು ಲ್ಯಾಂಡಿಂಗ್ ಕೇಂದ್ರಗಳ ಅಭಿವೃದ್ಧಿಗೆ 3490 ಕೋಟಿ ರೂ.ಗಳ ಹೂಡಿಕೆಗಳನ್ನು ಯೋಜಿಸಿದೆ” ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
2021-22ರ ಬಜೆಟ್ನಲ್ಲಿ ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಪರಾದೀಪ, ಮತ್ತು ಪೆಟುಘಾಟ್ ಎಂಬ 5 ಪ್ರಮುಖ ಮೀನುಗಾರಿಕೆ ಬಂದರುಗಳ ಅಭಿವೃದ್ಧಿಯನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿ ಘೋಷಿಸಲಾಗಿದೆ ಎಂದಿದ್ದಾರೆ.
“ಅಲ್ಲದೆ, ನದಿಗಳು ಮತ್ತು ಜಲಮಾರ್ಗಗಳ ತೀರದಲ್ಲಿ ಒಳನಾಡು ಮೀನುಗಾರಿಕೆ ಬಂದರುಗಳು ಮತ್ತು ಮೀನು ಲ್ಯಾಂಡಿಂಗ್ ಕೇಂದ್ರಗಳ ಅಭಿವೃದ್ಧಿಯನ್ನು ಸಹ ಬಜೆಟ್ನಲ್ಲಿ ಘೋಷಿಸಲಾಗಿದೆ” ಎಂದು ಉತ್ತರವನ್ನು ಉಲ್ಲೇಖಿಸಲಾಗಿದೆ.
ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್) ಅಡಿಯಲ್ಲಿ ಮೀನುಗಾರಿಕೆ ಬಂದರುಗಳು ಮತ್ತು ಮೀನು ಲ್ಯಾಂಡಿಂಗ್ ಕೇಂದ್ರಗಳ ಅಭಿವೃದ್ಧಿಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತಗಳಿಗೆ ರಿಯಾಯಿತಿ ಹಣಕಾಸು ಒದಗಿಸಲಾಗಿದೆ ಎಂದು ಸಚಿವರು ಸಂಸತ್ತಿಗೆ ಮಾಹಿತಿ ನೀಡಿದರು.
“ಇಲ್ಲಿಯವರೆಗೆ, 3451.32 ಕೋಟಿ ರೂಪಾಯಿಗಳ 14 ಮೀನುಗಾರಿಕೆ ಬಂದರು ಯೋಜನೆಗಳಿಗೆ ಎಫ್ಐಡಿಎಫ್ ಅಡಿಯಲ್ಲಿ ಅನುಮೋದನೆ ನೀಡಲಾಗಿದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.